
ಮುಂಡಗೋಡ: ಇಲ್ಲಿನ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ ಗುಂಜಾವತಿಯ ಸುರೇಶ ಕೆಂಪೆಗೌಡ ಎಂಬಾತರ ಬೈಕನ್ನು ಕಳ್ಳರು ಕದ್ದಿದ್ದಾರೆ.
ಜ 21ರಂದು ಬೈಕ್ ಕಳ್ಳತನ ನಡೆದಿದ್ದು, ಈವರೆಗೆ ಹುಡುಕಿದರೂ ಸಿಕ್ಕಿಲ್ಲ. ಕಪ್ಪು ಗೆರೆಗಳಿರುವ ಸ್ಪಾ÷್ಲಂಡರ್ ಪ್ಲೋ ಬೈಕ್ ಇದಾಗಿತ್ತು. ಬೈಕ್ ಕಳೆದಿದ್ದರಿಂದ ರೈತನಿಗೆ 20 ಸಾವಿರ ರೂ ನಷ್ಟವಾಗಿದೆ. ತನ್ನ ಬೈಕ್ ಹುಡುಕಿಕೊಡುವಂತೆ ಆತ ಪೊಲೀಸರ ಮೊರೆ ಹೋಗಿದ್ದಾನೆ. ನಿನ್ನೆ ಅಂಕೋಲಾ ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿಯ ಬೈಕ್ ಕದ್ದ ಬಗ್ಗೆ ವರದಿಯಾಗಿತ್ತು.