
ಯಲ್ಲಾಪುರ: ಅಖಿಯ ಭಾರತೀಯ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ `ರಾಮಾಯಣ ಕಾವ್ಯ\’ ಅಭಿಯಾನ ನಡೆಸುತ್ತಿದೆ.
ಜೂ 23ರ ಭಾನುವಾರ ಮಧ್ಯಾಹ್ನ 3ಗಂಟೆಗೆ ಯಲ್ಲಾಪುರ-ಶಿರಸಿ ರಸ್ತೆಯಲ್ಲಿರುವ ಶಂಕರ ಭಟ್ಟ ತಾರೀಮಕ್ಕಿ ಅವರ ಮನೆ ಮಾಳಿಗೆ ಮೇಲೆ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಹರಿಪ್ರಕಾಶ ಕೋಣೆಮನೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ರಾಮಾಯಣದ ಬಾಲಕಾಂಡದ ಕುರಿತು ಉಮ್ಮಚಗಿ ಸಂಸ್ಕೃತ ಪಾಠಶಾಲೆ ಅಧ್ಯಾಪಕ ಡಾ ಮಹೇಶ ಭಟ್ಟ ವ್ಯಾಖ್ಯಾನ ನೀಡುವರು. ಇದಾದ ನಂತರ ಸಂವಾದ ನಡೆಯಲಿದ್ದು, ಆಸಕ್ತರು ಪ್ರಶ್ನೆ ಕೇಳಿ ಉತ್ತರ ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ.