
ಜೊಯಿಡಾ: ತಿಂಬೋಲಿ ಗ್ರಾಮದಲ್ಲಿ ಸಿದ್ಧವಾಗುತ್ತಿರುವ `ಚಿಗುರು\’ ರೆಸಾರ್ಟಿನ ಸ್ಟೀಲ್ ರಾಡ್\’ಗಳನ್ನು ಕಳ್ಳರು ದೋಚಿದ್ದಾರೆ.
ಬೆಳಗಾವಿಯ ಖಾನಾಪುರದ ಅಬ್ದುಲ್ ರೆಹಮಾನ್ ಅವರಿಗೆ ಸೇರಿದ ರೆಸಾರ್ಟ ಇದಾಗಿದ್ದು, ಹುಬ್ಬಳ್ಳಿ ನಿಯಾಜ್ ಅಹ್ಮದ್ ಶೇಖ್ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದರು. ಅಲ್ಲಿ ಕಟ್ಟಡ ನಿರ್ಮಾಣಕ್ಕಾಗಿ ನಿಯಾಜ್ ಸಾಮಗ್ರಿ ಖರೀದಿಸಿದ್ದು, ನಂತರ ಮಾಲಕರಿಂದ ಅದಕ್ಕೆ ತಗುಲಿದ ಹಣ ಪಡೆಯುತ್ತಿದ್ದರು. ಅದರಂತೆ ಜೂ 16ರಂದು ಅವರು ಖರೀದಿಸಿದ್ದ 10 ಎಂ ಎಂ ಅಳತೆಯ 1 ಟನ್ ಸ್ಟೀಲ್ ರಾಡನ್ನು ಕಳ್ಳರು ಅಪಹರಿಸಿದ್ದಾರೆ.