
ಅಂಕೋಲಾ: ಯಲ್ಲಾಪುರ ತಾಲೂಕಿನ ಉಮ್ಮಚ್ಗಿಯ ಅಣ್ಣಪ್ಪ ಬೋವಿವಡ್ಡರ್ ಎಂಬಾತ ರಾಮನಗುಳಿಯ ಸೋದರತ್ತೆ ಮನೆಗೆ ಹೋಗಿದ್ದು, ಅಲ್ಲಿಂದ ಕಣ್ಮರೆಯಾಗಿದ್ದಾನೆ.
ಜೂ 14ರಂದು ರಾಮನಗುಳಿಯ ಸೋದರತ್ತೆ ಯಲ್ಲವ್ವರ ಮನೆಗೆ ಆತ ಹೋಗಿದ್ದ. ಅಲ್ಲಿನ ಭಟ್ಟರ ಮನೆಯಲ್ಲಿ 3 ದಿನ ಕೆಲಸವನ್ನು ಮಾಡಿದ್ದ. ಅದಾದ ನಂತರ ಜೂ 16ರ ರಾತ್ರಿ 11 ಗಂಟೆಗೆ ಪತ್ನಿಗೆ ಫೋನ್ ಮಾಡಿದ್ದ ಆತ `ಮಕ್ಕಳನ್ನು ಚನ್ನಾಗಿ ನೋಡಿಕೋ. ನಾನು ಮತ್ತೆ ಸಿಗುವುದಿಲ್ಲ.\’ ಎಂದು ಹೇಳಿದ್ದ. ಇದಕ್ಕೆ ಮನೆಯವರು ಹೆಚ್ಚಿಗೆ ತಲೆಕೆಡಿಸಿಕೊಂಡಿರಲಿಲ್ಲ. ಜೂ 17ರ ಬೆಳಗ್ಗೆ ಆತ ಸೋದತ್ತೆ ಮನೆಯಲ್ಲಿ ಇರಲಿಲ್ಲ. ಎಲ್ಲಿ ಹುಡುಕಿದರೂ ಆತನ ಸುಳಿವು ಸಿಗಲಿಲ್ಲ. ಹೀಗಾಗಿ ಇದೀಗ ಆತನ ಅಣ್ಣ ಮಂಜುನಾಥ ಬೋವಿವಡ್ಡರ್ ತಮ್ಮನ ಹುಡುಕಾಟಕ್ಕಾಗಿ ಪೊಲೀಸರಿಗೆ ಮನವಿ ಮಾಡಿದ್ದು, ಪೊಲೀಸರು ಆತನ ಹುಡುಕಾಟ ನಡೆಸಿದ್ದಾರೆ.