
ಜಾನುವಾರುಗಳಲ್ಲಿ ಹರಡುತ್ತಿರುವ ಚರ್ಮಗಂಟು ರೋಗ ತಡೆಗೆ ಜಿಲ್ಲೆಯಲ್ಲಿ ಉತ್ತರ ಕನ್ನಡ ಅಭಿಯಾನ ನಡೆಯುತ್ತಿದ್ದು, ಎಲ್ಲಾ ಜಾನುವಾರುಗಳಿಗೆ ಜುಲೈ 20ರವರೆಗೆ ಚರ್ಮಗಂಟು ರೋಗದ ವಿರುದ್ಧ ಲಸಿಕೆ ಹಾಕುವ ಅಭಿಯಾನ ನಡೆಯಲಿದೆ.
ಜಾನುವಾರುಗಳಲ್ಲಿ ವೈರಸ್\’ನಿಂದ ಬರುವ ಚರ್ಮಗಂಟು ರೋಗವು ನೊಣ,
ಸೊಳ್ಳೆ ಹಾಗೂ ಉಣ್ಣೆಗಳಿಂದ ಹರಡುವ ಸಾಧ್ಯತೆ ಹೆಚ್ಚಿದೆ. ರೋಗ ತಗುಲಿದ ಜಾನುವಾರುಗಳಲ್ಲಿ ಆರಂಭದಲ್ಲಿ ಜ್ವರ ಕಾಣಿಸಿಕೊಳ್ಳಲಿದ್ದು, ಬಳಿಕ ಚರ್ಮದ ಮೇಲೆ ಗಂಟುಗಳು ಕಾಣಿಸಿಕೊಳ್ಳುತ್ತವೆ. ರೋಗ ಲಕ್ಷಣಗಳು ತೀವ್ರತರವಾಗಿದಲ್ಲಿ ಅವು ಸಾವನಪ್ಪುತ್ತವೆ.
ಹೀಗಾಗಿ ನಾಲ್ಕು ತಿಂಗಳ ಮೇಲ್ಪಟ್ಟ ಎಲ್ಲಾ ಜಾನುವಾರುಗಳಿಗೂ ಲಸಿಕೆ ಹಾಕಿಸಿಕೊಳ್ಳುವುದು ಸೂಕ್ತ. ಕಳೆದ ವರ್ಷ ಲಸಿಕೆ ಹಾಕಿಸಿದ್ದರೂ ಈ ವರ್ಷ ಮತ್ತೆ ಹಾಕಿಸುವುದನ್ನು ಮರೆಯದಿರಿ. ಪಶು ಸಂಗೋಪನೆ ಇಲಾಖೆಯ ಅಧಿಕಾರಿಗಳು ಜಾನುವಾರು ಇದ್ದಲ್ಲಿಯೇ ಆಗಮಿಸಿ ಲಸಿಕೆ ಹಾಕುತ್ತಾರೆ. ಅದಕ್ಕೆ ನೀವು ಸಹಕರಿಸಿ..