
ಕುಮಟಾ: ಪಟ್ಟಣದಲ್ಲಿ 700ಕ್ಕೂ ಅಧಿಕ ಮಕ್ಕಳು ಬೀದಿ ಬೀದಿ ಸಂಚರಿಸಿ `ಯೋಗ ಸಂದೇಶ\’ ನೀಡಿದರು.
ಪಟ್ಟಣದ ಗಿಬ್ ವೃತ್ತದ ಸನಿಹದಲ್ಲಿ ಕೊಂಕಣ ಎಜುಕೇಶನ್ ಟ್ರಸ್ಟ್\’ನ ಅಂಗ ಸಂಸ್ಥೆಗಳ ವಿದ್ಯಾರ್ಥಿಗಳು ನಡೆಸಿದ ವಿಶ್ವ ಯೋಗ ದಿನದ ಜಾಥಾ ಉದ್ಘಾಟಿಸಿದ ಕುಮಟಾ ವೃತ್ತ ನಿರೀಕ್ಷಕ ತಿಮ್ಮಪ್ಪ ನಾಯ್ಕ `ಯೋಗವು ಮಾನವನ ದೇಹವನ್ನು ಸದೃಢವಾಗಿಸುತ್ತದೆ. ಮಾನಸಿಕ ಆರೋಗ್ಯವನ್ನು ಹೆಚ್ಚಿಸುತ್ತದೆ. ಇದರಿಂದಾಗಿ ಉತ್ತಮ ಜೀವನ ಸಾಗಿಸಲು ಸಾಧ್ಯ\’\’ ಎಂದು ಹೇಳಿದರು. `ಯೋಗದಿಂದ ಮಧುಮೇಹ, ರಕ್ತದ ಒತ್ತಡ ಸೇರಿದಂತೆ ಹಲವು ರೋಗ ದೂರ ಮಾಡಬಹಯದು. ಯೋಗದಿಂದ ಮನಸ್ಸಿಗೆ ಸೂಕ್ತ ಪ್ರೇರಣೆ ಸಿಗುತ್ತದೆ\’ ಎಂದರು.
ವಿದ್ಯಾರ್ಥಿಗಳು ಯೋಗಾಸನದ ಹಲವು ಬಂಗಿಗಳನ್ನು ಪ್ರದರ್ಶಿಸಿದರು. ಯೋಗ ಗುರು ಸೇರಿದಂತೆ ಇನ್ನಿತರರ ಛದ್ಮವೇಶಗಳು ಗಮನಸೆಳೆದವು. ಕೊಂಕಣ ಎಜುಕೇಶನ್ ಟ್ರಸ್ಟ್\’ನ ಸಹ ಕಾರ್ಯದರ್ಶಿ ಶೇಷಗಿರಿ ಶಾನಭಾಗ, ವಿಶ್ವಸ್ಥರಾದ ರಾಮಕೃಷ್ಣ ಗೋಳಿ, ವಿಧಾತ್ರಿ ಅಕಾಡೆಮಿಯ ಗುರುರಾಜ ಶೆಟ್ಟಿ ಜಾಥಾದಲ್ಲಿದ್ದರು. ಮುಖ್ಯ ಶಿಕ್ಷಕಿ ಸುಮಾ ಪ್ರಭು, ಶೈಕ್ಷಣಿಕ ಸಲಹೆಗಾರ ಆರ್ ಎಚ್ ದೇಶಭಂಡಾರಿ ಇತರರು ಇದ್ದರು. ಜಿ ಎಸ್ ಬಿ ವಾಹಿನಿಯವರು ಪಾನೀಯ ಹಂಚಿದರು.