
ಭಟ್ಕಳ: ಮುರುಡೇಶ್ವರ ರೈಲ್ವೆ ನಿಲ್ದಾಣದಲ್ಲಿನ ನೀರಿನ ಪಂಪ್ ಕಳ್ಳರ ಪಾಲಾಗಿದೆ.
ಅನೇಕ ವರ್ಷಗಳಿಂದ ಈ ರೈಲು ನಿಲ್ದಾಣದ ಜಾಗದಲ್ಲಿ ತೆರೆದ ಬಾವಿಯಿದ್ದು, ಈ ಬಾವಿಗೆ 2024ರ ಮಾರ್ಚ ತಿಂಗಳಿನಲ್ಲಿ 5ಎಚ್.ಪಿ ಸಾಮರ್ಥ್ಯದ ಪಂಪ್ ಅಳವಡಿಸಲಾಗಿತ್ತು. ಕಿಲೋರ್ಸಕರ್ ಕಂಪನಿಯ ಸಬ್ ಮರ್ಸಿಬಲ್ ಪಂಪ್ ಖರೀದಿಗೆ ಕೊಂಕಣ ರೈಲ್ವೆ 26752ರೂ ಹಣವನ್ನು ಪಾವತಿಸಿತ್ತು. ಜೂ 21ರಂದು ರೈಲ್ವೆ ಸಿಬ್ಬಂದಿ ನೀರು ಬಿಡಲು ಸ್ಥಳಕ್ಕೆ ಹೋದಾಗ ಅಲ್ಲಿ ಪಂಪ್ ಇರಲಿಲ್ಲ. ಇದೀಗ ಕಾಣೆಯಾದ ಪಂಪ್ ಹುಡುಕಿಕೊಡಿ ಎಂದು ಕೊಂಕಣ ರೈಲ್ವೆಯ ಸೆಕ್ಷನ್ ಇಂಜಿನಿಯರ್ ಜಾನ್ ಡೇನಿಯಲ್ ಪೊಲಿಸರಿಗೆ ದುಂಬಾಲು ಬಿದ್ದಿದ್ದಾರೆ.