
ಭಟ್ಕಳ: ಶಾಲೆಯಿಂದ ಮನೆಗೆ ಮರಳುತ್ತಿದ್ದ ಮಹಮದ್ ಅರ್ಪಾನ್ ಎಂಬಾತನಿಗೆ ರಿಕ್ಷಾ ಗುದ್ದಿದ ಏಜಾಜ್ ಅಹ್ಮದ್ ಅಬುಲ್ ಎಂಬಾತ ಬಾಲಕನ ನಾಲ್ಕು ಹಲ್ಲು ಮುರಿದಿದ್ದಾನೆ.
ಜೂ 18ರ ಸಂಜೆ 4.15ಕ್ಕೆ ಮಹಮದ್ ಅರ್ಪಾನ್ `ನ್ಯೂ ಶಮ್ಸ್\’ ಶಾಲೆ ಬಳಿ ನಡೆದು ಬರುತ್ತಿದ್ದ. ಆಗ, ತೆಂಗಿನಗುoಡಿ ಕಡೆಯಿಂದ ಅಡ್ಡಾದಿಡ್ಡಿ ರಿಕ್ಷಾ ಓಡಿಸಿಕೊಂಡು ಬಂದ ಏಜಾಜ್ ಅಹ್ಮದ್ ಅಬುಲ್ ಹಿಂದಿನಿoದ ಶಾಲಾ ಬಾಲಕನಿಗೆ ರಿಕ್ಷಾ ಗುದ್ದಿದ. ಇದರ ಪರಿಣಾಮ ಬಾಲಕ ಮುಗ್ಗರಿಸಿ ಬಿದ್ದಿದ್ದು, ಆತನ ಮುಖ ನೆಲಕ್ಕೆ ಅಪ್ಪಳಿಸಿದ್ದರಿಂದ ಮುಂದಿನ ನಾಲ್ಕು ಹಲ್ಲುಗಳು ಮುರಿದಿವೆ. ರಕ್ತದ ಮೊಡವಿನಲ್ಲಿಯೇ ಮನೆಗೆ ಹೋದ ಬಾಲಕ ಪಾಲಕರಲ್ಲಿ ವಿಷಯ ತಿಳಿಸಿದ್ದು, ರಿಕ್ಷಾ ಚಾಲಕನ ವಿರುದ್ಧ ದಸ್ತಗಿರಿ ಅತಾಉಲ್ಲಾ ರೆಹಮಾನ್ ಪೊಲೀಸ್ ದೂರು ನೀಡಿದ್ದಾರೆ.