
ಹೊನ್ನಾವರ: ಗೇರುಸೊಪ್ಪದ ಕಡೆ ಹೊರಟಿದ್ದ ಬಸ್ಸಿನಲ್ಲಿದ್ದ ಹಡಿನ ಬಾಳ ಗ್ರಾಮದ ಕೃಷ್ಣ ಶೆಟ್ಟಿ ಎಂಬಾತರು ಹೃದಯಘಾತದಿಂದ ಸಾವನಪ್ಪಿದ್ದಾರೆ.
65 ವರ್ಷದ ಅವರು ಆಯಾಸಪಟ್ಟು ಬಸ್ಸು ಏರಿದ್ದರು. ಬಸ್ಸಿನಲ್ಲಿ ಕುಳಿತು ಅವರು ಸುದಾರಿಸಿಕೊಳ್ಳುತ್ತಿರುವಾಗ ಬಸ್ಸು ಹೊರಟಿದ್ದು, ಸ್ವಲ್ಪ ದೂರ ತೆರಳುವವರಲ್ಲಿ ಅವರು ಕುಸಿದು ಬಿದ್ದರು. ಇದನ್ನು ತಿಳಿದ ಚಾಲಕ ತಕ್ಷಣ ಬಸ್ಸನ್ನು ಆಸ್ಪತ್ರೆ ಕಡೆ ತಿರುಗಿಸಿದ್ದು, ಆದರೂ ಪ್ರಯೋಜನವಾಗಿಲ್ಲ. ಆಸ್ಪತ್ರೆಗೆ ತೆರಳುವ ವೇಳೆಗಾಗಲೇ ಅವರು ಸಾವನಪ್ಪಿದ ಬಗ್ಗೆ ವೈದ್ಯರು ತಿಳಿಸಿದ್ದಾರೆ. ಹೊನ್ನಾವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ