
ಕುಮಟಾ: ಕುಮಟಾ – ಹೊನ್ನಾವರ ಕ್ಷೇತ್ರ ಶಾಸಕ ದಿನಕರ ಶೆಟ್ಟರ ಸಹೋದರ ಮಧುಕರ ಶೆಟ್ಟಿ ಅವರ ಮನೆಯಲ್ಲಿ ಸಿಲೆಂಡರ್ ಸ್ಪೋಟಗೊಂಡಿದೆ.
ಈ ಸ್ಪೋಟದಿಂದ ಎಲ್ಲರೂ ಪಾರಾಗಿ ಜೀವ ಉಳಿಸಿಕೊಂಡಿದ್ದಾರೆ. ಪಟ್ಟಣದ ಕೊಪ್ಪಳಕರವಾಡಿಯಲ್ಲಿ ಮಧುಕರ್ ಶೆಟ್ಟಿ ವಾಸವಾಗಿದ್ದರು. ಸಿಲೆಂಡರ್ ಸೋರಿಕೆ ಬಗ್ಗೆ ಅವರಿಗೆ ಗೊತ್ತಿರಲಿಲ್ಲ. ಮನೆಯಲ್ಲಿ ಸ್ಪೋಟವಾದ ತಕ್ಷಣ ಎಲ್ಲರೂ ಓಡಿ ಹೊರ ಬಂದಿದ್ದು, ಸುಮಾರು ಹೊತ್ತಿನವರೆಗೆ ಕಟ್ಟಡದಿಂದ ಹೊಗೆ ಹೊರಬರುತ್ತಿತ್ತು. ನಂತರ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಆಗಮಿಸಿ ಬೆಂಕಿ ಆರಿಸಿದರು. ಸ್ಪೋಟದ ತೀವೃತೆ ಸಣ್ಣ ಪ್ರಮಾಣದಲ್ಲಿದ್ದಿದ್ದರಿಂದ ಜೀವ ಉಳಿದಿದೆ. ಬೆಂಕಿಯ ರಭಸಕ್ಕೆ ಮನೆಯ ಗೋಡೆಗಳಿಗೆ ಬಿರುಕು ಮೂಡಿದ್ದು, ಅಡುಗೆ ಮನೆಯಲ್ಲಿನ ಸಾಮಗ್ರಿಗಳು ಹಾಳಾಗಿವೆ.