
ಬಿಸಗೋಡು ಪ್ರೌಢಶಾಲೆಯಲ್ಲಿ ಯೋಗ ದಿನ ಅಂಗವಾಗಿ ನಡೆದ ಸೂರ್ಯ ನಮನ
ಯಲ್ಲಾಪುರ: ಬಿಸಗೋಡು ಪ್ರೌಢಶಾಲೆಯಲ್ಲಿ ಯೋಗ ದಿನಾಚರಣೆ ಅಂಗವಾಗಿ ಸಾಮೂಹಿಕ `ಸೂರ್ಯ ನಮಸ್ಕಾರ\’ ಕಾರ್ಯಕ್ರಮ ನಡೆದಿದ್ದು, ಯೋಗ – ಧ್ಯಾನ ಮಾಡಿದ ವಿದ್ಯಾರ್ಥಿಗಳು ನಿರಾಳರಾದರು.
ಈ ಸಂದರ್ಭದಲ್ಲಿ ದೈಹಿಕ ಶಿತಲೀಕರಣ ಹಾಗೂ ನಿಂತು ಮಾಡುವ ಆಸನಗಳ ಬಗ್ಗೆ ಶಿಕ್ಷಕರು ಪಾಠ ಮಾಡಿದರು. ದೈಹಿಕ ಶಿಕ್ಷಣ ಶಿಕ್ಷಕ ವಿನೋದ್ ನಾಯಕ ವಿವಿಧ ಆಸನಗಳ ಬಗ್ಗೆ ತಿಳಿಸಿದರು. ಪದ್ಮಾಸನ, ವಜ್ರಾಸನ, ಮರ್ಜಾಲಾಸನ, ಶಶಾಂಕಾಸನ, ಸೇತುಬಂಧಾಸನ, ತಾಡಾಸನ, ಚಕ್ರಾಸನ, ಶಿರ್ಶಾಸನದ ಬಗ್ಗೆ ಹೇಳಿ ಅವುಗಳ ಮಹತ್ವ ವಿವರಿಸಿದರು. ಶಿಕ್ಷಕರಾದ ಶ್ರೀಧರ್ ಹೆಗಡೆ, ವೀ ಎಮ್ ಭಟ್, ಸದಾನಂದ ದಬಗಾರ, ರವಿಕುಮಾರ್ ಕೆಎನ್, ಶೈಲಾ ಎಂ ಭಟ್ ಉಪಸ್ಥಿತರಿದ್ದು ತಾವು ಕೂಡ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ಸುಗೊಳಿಸಿದರು.