
ಶಿರಸಿ: ಅರಣ್ಯವಾಸಿಗಳ ಸಮಸ್ಯೆಗಳ ಸ್ಪಂಧಿಸುವ ಹಿನ್ನಲೆಯಲ್ಲಿ ಜೂ 25ರಂದು ಮುಂಜಾನೆ 10.30 ಕ್ಕೆ ಶಿರಸಿಯಲ್ಲಿ `ಅರಣ್ಯವಾಸಿಗಳ ಸಮಸ್ಯೆಗಳ ಅದಾಲತ್\’ ಸಂಘಟಿಸುವ ಮೂಲಕ ಅರಣ್ಯವಾಸಿಗಳು ಅರಣ್ಯ ಇಲಾಖೆಗೆ ಸಮಸ್ಯೆಗಳನ್ನು ಮಂಡಿಸಲಾಗುವುದು ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.
`ಜಿಲ್ಲಾದ್ಯಂತ ಅರಣ್ಯವಾಸಿಗಳ ಸಾಗುವಳಿಯ ಸಂದರ್ಭದಲ್ಲಿ ಉಂಟಾಗುತ್ತಿರುವ ಅನಾನೂಕುಲತೆ, ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ಅರ್ಜಿ ಸಲ್ಲಿಸಿ ಮಂಜೂರಿ ಪ್ರಕ್ರಿಯೆ ಸಂದರ್ಭದಲ್ಲಿ ಅರಣ್ಯವಾಸಿಗಳ ಸಾಗುವಳಿಗೆಗೆ ಉಂಟಾಗುತ್ತಿರುವ ಸಮಸ್ಯೆ ಹಾಗೂ ಜಿ.ಪಿ.ಎಸ್. ಮಾನದಂಡದಿoದ ಉಂಟಾಗುತ್ತಿರುವ ಕಾನೂನಾತ್ಮಕ ಸಮಸ್ಯೆಗಳ ಕುರಿತು ಚರ್ಚಿಸಲಾಗುತ್ತದೆ. ಅರಣ್ಯ ಇಲಾಖೆಯ ಅರಣ್ಯವಾಸಿಗಳ ಸಮಸ್ಯೆಗಳನ್ನ ಗಮನಕ್ಕೆ ತರುವ ಉದ್ದೇಶದಿಂದ ಅದಾಲತ್ ಸಂಘಟಿಸಲಾಗಿದೆ\’ ಎಂದು ಅವರು ಹೇಳಿದರು. `ಅದಾಲತ್ ಕಾರ್ಯಕ್ರಮದಲ್ಲಿ ಹಿರಿಯ ಅರಣ್ಯ ಅಧಿಕಾರಿಗಳು ಉಪಸ್ಥಿತರಿದ್ದು, ಅರಣ್ಯವಾಸಿಗಳ ಸಮಸ್ಯೆಗಳಿಗೆ ಅದಾಲತ್ನಲ್ಲಿ ಸ್ಪಂದಿಸಲಿದ್ದಾರೆ\’ ಎಂದವರು ಹೇಳಿದ್ದಾರೆ.