
ಕಾರವಾರ: ಜೆಸಿಬಿ ಯಂತ್ರ ಬಾಡಿಗೆ ನೀಡಿ ಜೀವನ ನಡೆಸುತ್ತಿದ್ದ ಸಂಕ್ರಿವಾಡದ ಆನಂದ ನಾಯ್ಕ ಅವರು ಸೇವೆಗೆ ತಕ್ಕ ಹಣ ಕೇಳಿದ್ದರಿಂದ ಪೆಟ್ಟು ತಿಂದಿದ್ದು, ಹಣ ಕೊಡಬೇಕಾದವರು ಹಾಕಿದ ಬೆದರಿಕೆಯಿಂದ ನಲುಗಿದ್ದಾರೆ.
ಸಿದ್ಧರದ ಜ್ಞಾನೇಶ್ವರ ಕೋಳಂಬಕರ್ ಎಂಬಾತರಿಗೆ ಆನಂದ ನಾಯ್ಕ ನಾಲ್ಕು ತಿಂಗಳ ಮಾತಿಗೆ ಜೆಸಿಬಿ ಬಾಡಿಗೆಗೆ ನೀಡಿದ್ದರು. ಇದಕ್ಕೆ ಪ್ರತಿ ತಿಂಗಳು 1 ಲಕ್ಷ ರೂ ನೀಡುವಂತೆ ಒಪ್ಪಂದ ಮಾಡಿಕೊಂಡಿದ್ದರು. ಆದರೆ, ಜೆಸಿಬಿಯನ್ನು ಬಳಸಿಕೊಂಡವರು ಹಣ ನೀಡಿರಲಿಲ್ಲ. ಹಣ ಕೇಳಿದಾಗಲೆಲ್ಲ ಚೌಕಾಸಿ ಮಾಡುತ್ತಿದ್ದರು. ಈ ವಿಷಯವನ್ನು ಆನಂದು ನಾಯ್ಕ ಅಲ್ಲಲ್ಲಿ ಹೇಳಿಕೊಂಡಿದ್ದರು. ಇದರಿಂದ ಸಿಟ್ಟಾದ ಜ್ಣಾನೇಶ್ವರ್ ತನ್ನ ಸಹೋದರರಾದ
ಗಣೇಶ ಕೋಳಂಬಕರ್, ಶಂಬು ಕೋಳಂಬಕರ್ ಹಾಗೂ ನೀಲೇಶ ಕೊಳಂಬಕರ್ ಎಂಬಾತರ ಜೊತೆ ಸೇರಿ ಆನಂದು ನಾಯ್ಕರಿಗೆ ಬೆದರಿಸಿದ್ದಾರೆ. ಜೀವ ಭಯದಿಂದ ಆನಂದು ನಾಯ್ಕ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದು, ಅದೀಗ ಪೊಲೀಸರಿಗೆ ವರ್ಗವಾಗಿದೆ.