
ಉತ್ತರ ಕನ್ನಡ ಜಿಲ್ಲೆಯ ಮೂರು ಕಡೆ ಅದೃಷ್ಟದ ಆಟ ಎಂಬ ಹೆಸರಿನಲ್ಲಿ ಜೂಜಾಟ ನಡೆಸುತ್ತಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.
ಅಂಕೋಲಾದ ಕೇಣಿಯಲ್ಲಿನ ಗೂಡಂಗಡಿ ಮೇಲೆ ದಾಳಿ ನಡೆಸಿದ ಪೊಲೀಸರಿಗೆ ಶ್ಯಾಮು ಬಂಟ್ ಎಂಬಾತ ಸಿಕ್ಕಿಬಿದ್ದಿದ್ದು, ಈತನಿಂದ ಪೊಲೀಸರು ಅಂಕಿ-ಸoಖ್ಯೆಗಳ ಪಟ್ಟಿ, ಮೊಬೈಲ್ ಹಾಗೂ 15960ರೂ ಹಣವನ್ನು ವಶಕ್ಕೆ ಪಡೆದರು. ಮುಂಡಗೋಡದ ನಂದಿಪುರದಲ್ಲಿ ಸಯ್ಯದ್ ಸರಬಿ ಎಂಬಾತ 1ರೂ ಹೂಡಿಕೆ ಮಾಡಿದವರಿಗೆ 80ರೂ ಎಂದು ಕೂಗುತ್ತಿದ್ದಾಗ ದಾಳಿ ನಡೆಸಿದ ಪೊಲೀಸರಿಗೆ ಜೂಜಾಟದ ಚೀಟಿ ಜೊತೆ 950ರೂ ಹಣ ಸಿಕ್ಕಿದ್ದು, ಹಣವನ್ನು ಆತ ಪೊಲೀಸರಿಗೆ ಕೊಟ್ಟಿಲ್ಲ. ಹೀಗಾಗಿ ಜೂಜಾಟಕ್ಕೆ ಉಪಯೋಗಿಸಿದ್ದ ಅಂಕಿ-ಸoಖ್ಯೆಗಳ ಪಟ್ಟಿ, ಪೆನ್ನುಗಳನ್ನು ಅವರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಇನ್ನೂ, ಮುಂಡಗೋಡದ ಕಾತೂರು ಗ್ರಾಮದ ಚಿಪಗೇರಿ ತಿರುವಿನಲ್ಲಿ ಓಸಿ ಆಡಿಸುತ್ತಿದ್ದ ಈರಪ್ಪ ಎಳವತ್ತಿಯನ್ನು ವಶಕ್ಕೆ ಪಡೆದ ಪೊಲೀಸರಿಗೆ 530ರೂ ಹಣ ದೊರೆತಿದೆ.