
ಕುಮಟಾ: ಗೋಕರ್ಣದ ಭದ್ರಕಾಳಿ ಕಾಲೇಜಿನ ಬಳಿ 2023ರಲ್ಲಿ ನಿರ್ಮಿಸಿದ 1.20 ಕೋಟಿ ರೂ ಮೌಲ್ಯದ ರಸ್ತೆ ಮೊದಲ ಮಳೆಗೆ ಕೊಚ್ಚಿ ಹೋಗಿದೆ.
ಮಳೆ ಶುರುವಿನಲ್ಲಿಯೇ ರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಈ ಬಗ್ಗೆ ತಿಳಿಸಿದರೂ ಅಧಿಕಾರಿಗಳು ಗಮನಿಸಿರಲಿಲ್ಲ. ಇದೀಗ ಗುಡ್ಡದಿಂದ ಬಂದ ಮಳೆ ನೀರು ರಸ್ತೆಯನ್ನು ಹಾಳು ಮಾಡಿದೆ. `ಖಾಸಗಿ ಜಾಗದವರು ಏಕಾಏಕಿ ನೀರು ಬಿಟ್ಟಿದ್ದರಿಂದ ರಸ್ತೆ ಹಾಳಾಗಿದೆ. ಮಣ್ಣು ಕುಸಿಯದಂತೆ ತಡೆಗೋಡೆ ಹಾಗೂ ಚರಂಡಿ ನಿರ್ಮಿಸಿ ಇದನ್ನು ಸರಿಪಡಿಸುತ್ತೇವೆ\’ ಎಂದು ಲೋಕೋಪಯೋಗಿ ಅಧಿಕಾರಿಗಳು ಹೇಳುತ್ತಿದ್ದಾರೆ.
ಮಳೆಗೆ ಕೊಚ್ಚಿದ ರಸ್ತೆ ಅಡಿಭಾಗದ ಮಣ್ಣು
`ಅಪಾಯದ ಅಂಚಿನಲ್ಲಿರುವ ಈ ರಸ್ತೆಯ ಮೂಲಕ ಓಂ ಕಡಲತೀರಕ್ಕೆ ಹೋಗಬಹುದಾಗಿದ್ದು, ರಸ್ತೆ ಕುಸಿದ ಬಗ್ಗೆ ನಾಮಫಲಕ ಅಳವಡಿಸಿದಲ್ಲಿ ಜನದಟ್ಟಣೆ ಕಡಿಮೆಯಾಗುವ ಸಾಧ್ಯತೆಯಿದೆ. ಹೀಗಾಗಿ ಇಲ್ಲಿ ರಸ್ತೆ ಕುಸಿದ ನಾಮಫಲಕ ಅಳವಡಿಸಬೇಕು\’ ಎಂಬುದು ಸಾರ್ವಜನಿಕರ ಅಭಿಪ್ರಾಯ.