
ಶ್ರೀರಾಮನ ಆರಾಧಕರಾಗಿರುವ ಪರಮ ಪೂಜ್ಯ ರಾಘವೇಶ್ವರ ಭಾರತೀ ಸ್ವಾಮೀಜಿ `ಭಾವ ರಾಮಾಯಣ – ರಾಮಾವತಾರಣ\’ ಎಂಬ ಕೃತಿ ರಚಿಸಿದ್ದು, 29 ಜೂನ್ 2024ರಂದು ಬೆಂಗಳೂರಿನ ಹೊಸಕೆರೆಹಳ್ಳಿಯ ಪಿ ಇ ಎಸ್ ಕಾಲೇಜಿನಲ್ಲಿ ಈ ಕೃತಿ ಬಿಡುಗಡೆಯಾಗಲಿದೆ.
ಪಂಚದ ನಿತ್ಯ ಚೇತನಗಳ ಪಟ್ಟಿಯಲ್ಲಿ ಶ್ರೀ ರಾಮಾಯಣಕ್ಕೆ ಸದಾ ಅಗ್ರಸ್ಥಾನ. ಹೀಗಾಗಿ ರಾಮಾಯಣ ಅರಿಯುವವರಿಗೆ ಈ ಕೃತಿ ಅತ್ಯಂತ ಪವೀತ್ರ. ಲೌಕಿಕ ಜೀವನದಲ್ಲಿ ಜನರ ನಿತ್ಯದ ಸಮಸ್ಯೆಗಳನ್ನು ಪರಿಹರಿಸುವ ವಿಧಾನದ ಬಗ್ಗೆ ಕೃತಿಯಲ್ಲಿದೆ. ವಾಲ್ಮೀಕಿ ರಾಮಾಯಣವನ್ನು ಅರಿತರೆ ಎಲ್ಲಾ ಸಮಸ್ಯೆಗಳಿಗೂ ಸಂಪೂರ್ಣ ಪರಿಹಾರ ದೊರೆಯುವುದು ಎಂಬುದನ್ನು ಈ ಕೃತಿ ಸಾರುತ್ತದೆ. ರಾಮಾಯಣಗ ಸೊಗಸನ್ನು ಪ್ರಪಂಚಕ್ಕೆ ತಿಳಿಸುವುದು ಈ ಪುಸ್ತಕದ ಆಶಯ. `ಎಲ್ಲಾ ವರ್ಗದ, ಎಲ್ಲಾ ವಯೋಮಾನದ, ಎಲ್ಲಾ ಜಾತಿ, ವೃತ್ತಿಯವರ ಎಲ್ಲಾ ಪ್ರಶ್ನೆಗಳಿಗೆ ಶ್ರೀ ಭಾವ ರಾಮಾಯಣದಲ್ಲಿ ಉತ್ತರವಿದೆ\’ ಎಂದು ರಾಘವೇಶ್ವರ ಭಾರತೀ ಶ್ರೀಗಳು ಹೇಳಿದ್ದಾರೆ.