
ಯಲ್ಲಾಪುರ ಅಂಕೋಲಾ ಗಡಿಭಾಗವಾದ ಗುಳ್ಳಾಪುರದ ಮಹಾಬಲೇಶ್ವರ ಭಟ್ಟ ಅವರ ಮನೆಯಲ್ಲಿ ಜೂ 23ರ ಸಂಜೆ ಶ್ಯಾಮಪ್ರಸಾದ ಮುಖರ್ಜಿ ಅವರ ಪುಣ್ಯತಿಥಿ ಅಂಗವಾಗಿ ಬಿಜೆಪಿಗರು ಗಿಡ ನಾಟಿ ಮಾಡಿದರು.
ಶ್ಯಾಮಪ್ರಸಾದ ಮುಖರ್ಜಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಬಗ್ಗೆ ಮಾತನಾಡಿದರು. `ಶ್ಯಾಮಪ್ರಸಾದ ಮುಖರ್ಜಿ ಅವರು ಹಿಂದೂತ್ವದ ವೈಚಾರಿಕತೆಗೆ ಅಪಾರ ಕೊಡುಗೆ ನೀಡಿದವರಾಗಿದ್ದು, ಅಖಂಡತೆಯನ್ನು ಎತ್ತಿ ಹಿಡಿದವರು. ಕಾಶ್ಮೀರದ ಉಳಿಯುವಿಕೆಗಾಗಿ ಹೋರಾಟ ನಡೆಸಿದವರು. ಅವರ ಆದರ್ಶಗಳು ಎಲ್ಲರಿಗೂ ಪ್ರೇರಣೆ\’ ಎಂದು ನೆರೆದಿದ್ದ ಹಿರಿಯರು ಹೇಳಿದರು. ಪಕ್ಷದ ಸೂಚನೆ ಮೇರೆಗೆ ಪ್ರತಿ ಬೂತ್\’ನಲ್ಲಿಯೂ ಈ ಕಾರ್ಯಕ್ರಮ ನಡೆಸಿ ಗಿಡ ನೆಡುವ ಬಗ್ಗೆ ನಿರ್ಧರಿಸಲಾಯಿತು.
ಬಿಜೆಪಿ ಮಂಡಳ ಅಧ್ಯಕ್ಷ ಪ್ರಸಾದ ಹೆಗಡೆ, ಪ್ರಮುಖರಾದ ನಾರಾಯಣ ಭಟ್ಟ ಏಕಾನ, ಭಟ್ಲಗುಂಡಿ ನಾರಾಯಣ ಭಟ್ಟ, ರಾಮು ನಾಯ್ಕ, ಗಣಪತಿ ಬೋಳಗುಡ್ಡೆ, ಚಂದ್ರಕಲಾ ಭಟ್ಟ, ವಿಶ್ವೇಶ್ವರ ಭಟ್ಟ ಏಕಾನ, ರಾಮಚಂದ್ರ ಭಟ್ಟ ಚಿಕ್ಯಾನಮನೆ, ಧನಂಜಯ ಪಿಳ್ಳೆ, ವಿಶ್ವೇಶ್ವರ ಹೆಗಡೆ ಇತರರು ಇದ್ದರು.