
ಯಲ್ಲಾಪುರ: `ರಾಮ ಮಂದಿರ ನಿರ್ಮಾಣ ಹಾಗೂ ನಳಂದ ವಿಶ್ವ ವಿದ್ಯಾಲಯ ಸ್ಥಾಪನೆ ಎರಡೂ ಸಹ ದೇಶದ ಬೆಳವಣಿಗೆಗೆ ಮಹತ್ವದ್ದಾಗಿದೆ ಎಂದು ಎಂದು ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹರಿಪ್ರಕಾಶ ಕೋಣೇಮನೆ ಹೇಳಿದರು.
ಜೂ 23ರಂದು ಶಿರಸಿ ರಸ್ತೆಯ `ಸಂಸ್ಕೃತಿ ನಿವಾಸ\’ದ ಸಭಾಭವನದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಆಶ್ರಯದಲ್ಲಿ ನಡೆದ `ರಾಮಾಯಣದ ಬಾಲಕಾಂಡ\’ದ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
`ರಾಮ ಮಂದಿರ ಹಾಗೂ ನಂಳoದ ವಿಶ್ವವಿದ್ಯಾಲಯ ಯಾವುದೇ ಜಾತಿ, ಧರ್ಮ, ಪಂಥಕ್ಕೆ ಸೀಮಿತವಲ್ಲ. ಭಾರತ ತನ್ನಲ್ಲಿನ ಮೌಲ್ಯಗಳನ್ನು ಜಗತ್ತಿಗೆ ಸಾರುತ್ತಿದ್ದು, ದೇಶ ಸಮೃದ್ಧಿಯಾಗಲು ರಾಮತತ್ವದ ಅನುಸರಣೆ ಅಗತ್ಯ\’ ಎಂದರು.
ಉಮ್ಮಚಗಿ ಶ್ರೀಮಾತಾ ವೇದ ಸಂಸ್ಕೃತ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಮಹೇಶ ಭಟ್ಟ ಉಪನ್ಯಾಸ ನೀಡಿ `ರಾಮಾಯಣ ಕಾವ್ಯವೂ ಮಹಾಭಾರತದ ಹಾಗೇ ಪಂಚಮ ವೇದವಾಗಿದೆ. ರಾಮಾಯಣವನ್ನು ಓದಿದರೆ ಎಲ್ಲ ಪ್ರಾಚೀನ ಗ್ರಂಥಗಳ ಮೌಲ್ಯಗಳು ಸಿಗುತ್ತದೆ\’ ಎಂದರು. ಅ.ಭಾ.ಸಾ.ಪ. ಜಿಲ್ಲಾಧ್ಯಕ್ಷ ಸಿದ್ದಾಪುರದ ಗಂಗಾಧರ ಕೊಳಗಿ ಮಾತನಾಡಿ `ಭಾರತೀಯ ಪರಂಪರೆ, ಮೌಲ್ಯಗಳನ್ನು ಪರಿಚಯಿಸಲು ರಾಮಾಯಣ, ಭಾರತದಿಂದ ಸಾಧ್ಯ\’ ಎಂದರು. ಸಂವಾದದಲ್ಲಿ ಕೆ ಎಸ್ ಅಗ್ನಿಹೋತ್ರಿ, ದಾಕ್ಷಾಯಿಣಿ ಪಿ ಎಸ್, ಈಶ್ವರದಾಸ, ಗಣಪತಿ ಭಟ್ಟ, ಮುಂತಾದವರು ಪಾಲ್ಗೊಂಡಿದ್ದರು. ಪ್ರಮುಖರಾದ ಪ್ರಮೋದ ಹೆಗಡೆ, ಎಂ.ಆರ್.ಹೆಗಡೆ ಕುಂಬ್ರೀಗುಡ್ಡೆ, ಜಗದೀಶ ಭಂಡಾರಿ, ಶೈಲಜಾ ಮಂಗಳೂರು, ಕೃಷ್ಣ ಪದಕಿ ಇದ್ದರು.
ಗಮಕ ಕಲಾ ಪರಿಷತ್ತಿನ ಜಿಲ್ಲಾಧ್ಯಕ್ಷೆ ಮುಕ್ತಾಶಂಕರ ಪ್ರಾರ್ಥಿಸಿದರು. ಪ್ರಮುಖರಾದ ಶಂಕರ ಭಟ್ಟ ತಾರೀಮಕ್ಕಿ ಸ್ವಾಗತಿಸಿದರು. ಸಹಕಾರ್ಯದರ್ಶಿ ಸಂಜಯ ಭಟ್ಟ ಬೆಣ್ಣೆ ನಿರ್ವಹಿಸಿದರು. ಪ್ರಧಾನ ಕಾರ್ಯದರ್ಶಿ ಪ್ರಕಾಶ ಭಾಗ್ವತ ವಂದಿಸಿದರು.