
ಯಲ್ಲಾಪುರ: ಪಿಯುಸಿ ಪರೀಕ್ಷೆಯ ಕಲಾ ವಿಭಾಗದಲ್ಲಿ ಸಾಧನೆ ಮಾಡಿದ ದನಗರಗೌಳಿ ಸಮುದಾಯದ ಜನ್ನಾಬಾಯಿ ಜಾನು ಕೋಕರೆ ಅವರನ್ನು ರಾಜ್ಯ ದನಗರಗೌಳಿ ಯುವ ಸೇನೆಯವರು ಸನ್ಮಾನಿಸಿ ಗೌರವಿಸಿದರು.
ಬೈಲಂದೂರು ಗೌಳಿವಾಡ ಗ್ರಾಮದ ಜಾನು ಕೋಕರೆ ಶೇ 95.66ರಷ್ಟು ಅಂಕಗಳಿಸಿ ಸಾಧನೆ ಮಾಡಿದ್ದಾರೆ. `ಗೌಳಿ ಸಮುದಾಯದವರು ಶೈಕ್ಷಣಿಕವಾಗಿ ಸಾಧನೆ ಮಾಡುತ್ತಿರುವುದು ಹೆಮ್ಮೆಯ ವಿಷಯ\’ ಎಂದು ದನಗರಗೌಳಿ ಯುವ ಸೇನೆಯ ಅಧ್ಯಕ್ಷ ಸಂತೋಷ ವರಕ್ ಹೇಳಿದರು. ಪ್ರಮುಖರಾದ ಬಾಬು ಶೇಂಡಗೆ, ಭರತ್ ಕೋಕರೆ, ಬಮ್ಮು ಫೋಂಡೆ, ಬಮ್ಮು ಬಿಚ್ಚುಕಲೆ, ಬಕ್ಕು ತೋರತ್, ಜಾವು ಪಟಕಾರೆ, ನಾರಾಯಣ ಕಾಂಬಳೆ, ಚಿಚ್ಚು ಎಡಗೆ ಹೊಸಳ್ಳಿ ಇದ್ದರು. ರವಿ ಶಿಂಧೆ ನಿರ್ವಹಿಸಿ, ಗೌರಿ ತೋರತ್ ವಂದಿಸಿದರು.