
ಕಾರವಾರ: ಗೋವಾದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ನಂದನಗದ್ದಾದ ನಾಗರಾಜ ನಾಯ್ಕ ಅವರಿಗೆ ಕುಮಟಾದ ಧೀರಜ್ ಪೆಡ್ನೆಕರ್ ಎಂಬಾತ ಜೂ 22ರ ರಾತ್ರಿ ಬೈಕ್ ಗುದ್ದಿದ್ದು, ಇದರಿಂದ ಇಬ್ಬರಿಗೂ ಗಾಯವಾಗಿದೆ.
ಕೆಲಸ ಮುಗಿಸಿ ರಾತ್ರಿ ಸ್ಕೂಟರ್ ಮೂಲಕ ಮನೆಗೆ ಬರುತ್ತಿದ್ದ ನಾಗರಾಜ ನಾಯ್ಕರಿಗೆ ಧೀರಜ್ ಪೆಡ್ನೆಕರ್ ಓಡಿಸಿಕೊಂಡು ಬಂದ ಬೈಕ್ ಮಾವಿನ ಹೊಳೆ ಸೇರುವೆ ಬಳಿ ಡಿಕ್ಕಿಯಾಗಿದೆ. ಧೀರಜ್ ಪೆಡ್ನೇಕರ್ ಹಿಂದಿನಿoದ ಬಂದು ನಾಗರಾಜ ನಾಯ್ಕರಿಗೆ ಗುದ್ದಿದ್ದಾರೆ. ಇದರಿಂದ ಇಬ್ಬರು ನೆಲಕ್ಕೆ ಅಪ್ಪಳಿಸಿದ್ದು, ಬೈಕ್ ಸಹ ಜಖಂ ಆಗಿದೆ.