
100 ವರ್ಷಗಳನ್ನು ಪೂರೈಸಿರುವ ಕರ್ಣಾಟಕ ಬ್ಯಾಂಕ್ ಯಲ್ಲಾಪುರದಲ್ಲಿ ಶಾಖೆ ತೆರೆದು ಇಂದು (ಜೂ 24) 13 ವರ್ಷ ಕಳೆದಿದೆ. ಈ ಹಿನ್ನಲೆ ಬ್ಯಾಂಕಿನಲ್ಲಿ ಸಂಭ್ರಮದ ವಾತಾವರಣ ಕಂಡುಬoದಿತು. ದಶಕದ ಹಿಂದೆ `ಡ್ರೀಮ್ ಲಾಜಿಸ್ಟಿಕ್ ಕಂಪನಿ\’ಯ ಕಟ್ಟಡದಲ್ಲಿ ಸೇವೆ ಶುರು ಮಾಡಿದ ಈ ಬ್ಯಾಂಕ್ ಇಂದಿಗೂ ಅಲ್ಲಿಯೇ ಸೇವೆ ಮುಂದುವರೆಸಿದ್ದು, ಶಾಸಕ ಶಿವರಾಮ ಹೆಬ್ಬಾರ್ ಅವರ ಒಡೆತನದ ಕಟ್ಟಡ ಇದಾಗಿದೆ. ಕಳೆದ ವರ್ಷದಿಂದ ಅದೇ ಕಟ್ಟಡದಲ್ಲಿ ಎಟಿಎಂ ಸೇವೆ ಸಹ ಸಿಗುತ್ತಿದೆ.
ಶಾಸಕ ಶಿವರಾಮ ಹೆಬ್ಬಾರ್ ಅವರು ದೀಪ ಬೆಳಗಿಸುವುದರ ಮೂಲಕ 13ನೇ ವರ್ಷದ ವಾರ್ಷಿಕ ಉತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬ್ಯಾಂಕಿನ ಸೇವೆಯ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಈ ವೇಳೆ ಬ್ಯಾಂಕಿನ ಹಿರಿಯ ಅಧಿಕಾರಿಗಳು ಹಾಗೂ ಗ್ರಾಹಕರು ಇದ್ದರು.