ದಾಂಡೇಲಿ: ಬೆಳಗಾವಿಯಿಂದ ದಾಂಡೇಲಿಗೆ ಲಾರಿ ಓಡಿಸಿಕೊಂಡು ಬರುತ್ತಿದ್ದ ಮಹೇಶ ಮಾಯಣ್ಣನವರ್ ಎಂಬಾತ ಇನ್ನೆರಡು ಲಾರಿಗಳಿಗೆ ತನ್ನ ಲಾರಿ ಗುದ್ದಿ ಆ ಲಾರಿಯನ್ನು ಜಖಂ ಮಾಡಿದ್ದಾನೆ.
ಜಾವಳ್ಳಿ ಕ್ರಾಸ್ ಬಳಿ ದಾಂಡೇಲಿ ಕಡೆ ನಾಟಾ ತುಂಬಿಕೊoಡು ಹೋಗುತ್ತಿದ್ದ ಲಾರಿಗೆ ಹಿಂದಿನಿoದ ಗುದ್ದಿದ್ದು, ಅದಾದ ನಂತರ ಹಳಿಯಾಳದಿಂದ ದಾಂಡೇಲಿ ಕಡೆ ಬರುತ್ತಿದ್ದ ಇನ್ನೊಂದು ಲಾರಿಗೆ ಗುದ್ದಿದ್ದಾನೆ. ಎರಡನೇ ಬಾರಿ ಈತ ಲಾರಿಗೆ ಗುದ್ದಿದಾಗ ಲಾರಿಯೊಳಗಿದ್ದ ಮಂಜುನಾಥ ಜೋಡಳ್ಳಿ ಎಂಬಾತನಿಗೆ ಗಾಯವಾಗಿದೆ. ಈ ಅಪಘಾತದಲ್ಲಿ ಮೂರು ಲಾರಿಗಳು ಜಖಂ ಆಗಿದೆ.