
ಯಲ್ಲಾಪುರ: ಮಲ್ಲಿಕಾ ಹೋಟೆಲ್ ಬಳಿ ನಡೆದ ಅಪಘಾತದಿಂದ ಗಾಯಗೊಂಡು ಹುಬ್ಬಳ್ಳಿಯ ಆಸ್ಪತ್ರೆ ಸೇರಿದ್ದ ಹೆಸ್ಕಾಂ ಸಿಬ್ಬಂದಿ ಗಂಗಾಧರ ಬೋವಿಡ್ಡರ್ (48) ಸಾವನಪ್ಪಿದ್ದಾರೆ.
ಗುಳ್ಳಾಪುರದ ಹೆಸ್ಕಾಂ ಕಚೇರಿಯಲ್ಲಿ ಅವರು ಕೆಲಸ ಮಾಡುತ್ತಿದ್ದರು. ಜೂ 16ರಂದು ಹುಬ್ಬಳ್ಳಿ – ಅಂಕೋಲಾ ಹೆದ್ದಾರಿಯ ಮಲ್ಲಿಕಾ ಹೋಟೆಲ್ ಬಳಿ ಅವರ ಬೈಕಿಗೆ ರಾಜು ಸೌದತ್ತಿ ಎಂಬಾತರ ಬೈಕ್ ಗುದ್ದಿತ್ತು. ರಾಜು ಅವರ ಬೈಕಿನಲ್ಲಿದ್ದ ಪ್ರತಿಭಾ ಎಂಬಾತರು ಸಹ ಗಾಯಗೊಂಡಿದ್ದರು. ಗಂಭೀರ ಗಾಯಗೊಂಡ ಗಂಗಾಧರ ಬೋವಿವಡ್ಡರ್\’ರನ್ನು ಹುಬ್ಬಳ್ಳಿಯ ಕಿಮ್ಸ್\’ಗೆ ದಾಖಲಿಸಲಾಗಿತ್ತು. ಆದರೆ, ಅವರು ಅಲ್ಲಿ ಚಿಕಿತ್ಸೆಗೆ ಸ್ಪಂದಿಸಲಿಲ್ಲ.