
ಹೊನ್ನಾವರ: ನೀರಹಬ್ಬ ಆಚರಿಸಲು ದೋಣಿಯಲ್ಲಿ ಹೋದವರು ಹಬ್ಬ ಮುಗಿಸಿ ಹಿಂತಿರುಗುವಾಗ ಸಿಡಿಸಿದ ಪಟಾಕಿ ಮೂವರ ಮುಖ ಸುಟ್ಟಿದೆ.
ಜೂ 24ರಂದು ನೀರಹಬ್ಬಕ್ಕಾಗಿ ಕೋಡಾಣಿಯ ಎಸುವ ಪ್ರಾನ್ಸಿಸ್ ವಾಜ್ ಎಂಬಾತರು ತಮ್ಮ ಸಹಚರರ ಜೊತೆ ದೋಣಿಯಲ್ಲಿ ಹೋಗಿದ್ದರು. ಅಲ್ಲಿ ಹಬ್ಬ ಮುಗಿಸಿ ಹೊಡಾಣಿ ಹೊಳೆದಂಡೆಗೆ ಬಂದಾಗ ಹೈಗುಂದದ ಲೆಸ್ಸಿ ಇಲಿಯಾಸ್ ಎಂಬಾತ ಪಟಾಕಿ ಸಿಡಿಸುತ್ತಿದ್ದ. ಎಸುವ ಪ್ರಾನ್ಸಿಸ್ ವಾಜ್ ಹಾಗೂ ದೋಣಿಯಲ್ಲಿದ್ದ ಆಂಟನಿ ಹೋರ್ಟಾ, ನವೀನ ಫರ್ನಾಂಡಿಸ್, ಲಿಯೋನ್ ಸಾವೇರಾ ರೋಡಿಗ್ರೆಸ್ ದೋಣಿಯಿಂದ ಇಳಿಯುತ್ತಿದ್ದಾಗ ಪಟಾಕಿ ಸಿಡಿದು ಮೂವರ ಮುಖ – ಕಣ್ಣುಗಳಿಗೆ ಗಾಯವಾಗಿದೆ. ಪಟಾಕಿ ಸಿಡಿಸುತ್ತಿದ್ದ ಲೆಸ್ಸಿ ಇಲಿಯಾಸ್\’ನ ಕೈಗೆ ಸಹ ಗಾಯವಾಗಿ ರಕ್ತ ಸೋರಲಾರಂಭಿಸಿದೆ. ಮತ್ತೊಬ್ಬನಿಗೆ ಸಹ ಪೆಟ್ಟಾಗಿದೆ. ಆಗ ಅಲ್ಲಿಯೇ ಇದ್ದ ವಿರಾಜ್ ಎಂಬಾತ ಇತರೊಡನೆ ಸೇರಿ ಎಲ್ಲರನ್ನು ಉಪಚರಿಸಿ ಹೊನ್ನಾವರ ಆಸ್ಪತ್ರೆಗೆ ದಾಖಲಿಸಿದ್ದು, ನಂತರ ಗಾಯಗೊಂಡ ಎಲ್ಲರನ್ನು ಹೆಚ್ಚಿನ ಚಿಕಿತ್ಸೆಗೆ ಮಣಿಪಾಲದ ಕೆಎಂಸಿ\’ಗೆ ತೆರಳಿ ಚಿಕಿತ್ಸೆ ಪಡೆಯುತ್ತಿದ್ದಾರೆ.