
ಕುಮಟಾ: ದೇವಗಿರಿ ಗ್ರಾಮ ಪಂಚಾಯತ ವ್ಯಾಪ್ತಿಯ ಮಾದೇವಿ ವೆಂಕಟೇಶ ವೈದ್ಯ ಅವರ ಮನೆಯ ಮೇಲೆ ಹಲಸಿನಮರ ಮುರಿದು ಬಿದ್ದಿದೆ. ಇದರಿಂದ ಅವರಿಗೆ ಅಂದಾಜು 70 ಸಾವಿರ ರೂ ಹಾನಿಯಾಗಿದೆ. ಹೊಲನಗದ್ದೆ ಗ್ರಾಮ ಪಂಚಾಯತ ವ್ಯಾಪ್ತಿಯ ಹಣ್ಣೆಮಠ ಎಂಬಲ್ಲಿ ನಾರಾಯಣ ತಿಮ್ಮಪ್ಪ ಮುಕ್ರಿ ಅವರ ಮನೆಯ ಸ್ನಾನದ ಕೋಣೆಯ ಮೇಲೆ ತೆಂಗಿನಮರ ಮುರಿದು ಬಿದ್ದು, ಅವರಿಗೆ ಅಂದಾಜು 10 ಸಾವಿರ ರೂ ನಷ್ಟವಾಗಿದೆ.
ಇನ್ನೂ ಅನೇಕ ಕಡೆ ವಿದ್ಯುತ್ ತಂತಿ ಹಾಗೂ ಮನೆಗಳ ಮೇಲೆ ಮರ ಬಿದ್ದಿದೆ. ಆದರೆ, ಎಲ್ಲಿಯೂ ದೊಡ್ಡ ಹಾನಿ ಆಗಿಲ್ಲ. ಅಲ್ಲಲ್ಲಿ ನೀರು ಸರಾಗವಾಗಿ ಹೋಗುವ ಜಾಗವನ್ನು ಜನ ಕಂಪೌAಡ್ ನಿರ್ಮಿಸಿ ಬಂದ್ ಮಾಡಿದ್ದು, ಇದರಿಂದ ಇತರರಿಗೆ ಸಮಸ್ಯೆಯಾಗುತ್ತಿದೆ. ಬಹುತೇಕ ಕಡೆಗಳಲ್ಲಿ ತಗ್ಗು ಪ್ರದೇಶದಲ್ಲಿ ನೀರು ತುಂಬಿದೆ. ಕೂಜಳ್ಳಿ ಹಾಗೂ ವಾಲ್ಗಳ್ಳಿ ಮಧ್ಯದ ಹಾರೋಡಿ ಬಳಿ ವ್ಯಕ್ತಿಯೊಬ್ಬರು ಮಳೆಯ ನೀರು ಹೋಗುವಲ್ಲಿ ಮಣ್ಣು ತುಂಬಿದ್ದು, ಇಲ್ಲಿ ರಸ್ತೆಯ ಮೇಲೆ ನೀರು ನಿಲ್ಲುತ್ತಿದೆ.