
ಶಿರಸಿ: 22 ವರ್ಷದ ನೌಷದ್ ಸಾಬ್ ಎಂಬಾತ ವಿಪರೀತ ಮದ್ಯ ಸೇವನೆ ಮಾಡುತ್ತಿದ್ದು, ಅದೇ ಗುಂಗಿನಲ್ಲಿ ನೇಣಿಗೆ ಶರಣಾಗಿದ್ದಾನೆ.
ಹೆಬ್ಬಳ್ಳಿಯಲ್ಲಿ ಹಮಾಲಿ ಕೆಲಸ ಮಾಡುತ್ತಿದ್ದ ಈತ ಜೂ 24ರ ರಾತ್ರಿ ಕೆಲಸ ಮುಗಿಸಿ ಬರುವಾಗ ಸಹ ಮದ್ಯ ಸೇವಿಸಿದ್ದ. ಬರುವಾಗ ಗಟಾರದಲ್ಲಿ ಬಿದ್ದು ಗಾಯಗೊಂಡಿದ್ದ. ರಾತ್ರಿ 10 ಗಂಟೆಗೆ ಮನೆ ಸೇರಿದ ಈತ ಮನೆಗೆ ಬಂದಾಗ ಆತನ ಮುಖ ಹಾಗೂ ಬುಜದ ಮೇಲೆ ಗಾಯಗಳಾಗಿದ್ದವು. ಮರುದಿನ ಮನೆಯಲ್ಲಿಯೇ ಮಲಗಿದ್ದ ಆತ ಮಧ್ಯಾಹ್ನದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.