
ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ಮನೆಯಿಂದ ಹೊರ ಬರುವಾಗ ಎಚ್ಚರವಿರಲಿ.
ರಸ್ತೆಯ ಮೇಲೆ ನೀರು ನಿಲ್ಲುವುದು ಸಾಮಾನ್ಯವಾಗಿರುವುದರಿಂದ ವಾಹನ ಓಡಿಸುವವರು ಎಂದಿಗಿoತ ನಿಧಾನವಾಗಿ ಚಲಿಸುವುದು ಒಳಿತು. ಗುಡುಗು-ಸಿಡಿಲು ಶುರುವಾದಾಗ ಮನೆಯಿಂದ ಹೊರಬರಬೇಡಿ. ವಿದ್ಯುತ್ ಕಂಬ ಹಾಗೂ ವಿದ್ಯುತ್ ತಂತಿಗಳಿAದ ಸಾಕಷ್ಟು ಅಂತರದಲ್ಲಿರಿ. ಅಪಾಯಕಾರಿ ಮರ, ವಿದ್ಯುತ್ ತಂತಿಗಳಿದ್ದರೆ ಸಂಬAಧಿಸಿದ ಇಲಾಖೆಯವರಿಗೆ ಮಾಹಿತಿ ನೀಡಿ. ಗುಡ್ಡ ಕುಸಿತ, ನೆರೆ ಪ್ರವಾಹದ ಸಾಧ್ಯತೆಗಳಿದ್ದು, ಆ ಬಗ್ಗೆಯೂ ಗಮನವಿರಲಿ. ಶಾಲಾ ಮಕ್ಕಳ ಬಗ್ಗೆ ಹೆಚ್ಚಿನ ಮುತುವರ್ಜಿವಹಿಸಿ.