
ಅಂಕೋಲಾ: ಹಾಸ್ಯ ಕಲಾವಿದ ರಾಜು ನಾಯ್ಕ ಅವರಿಗೆ ಹಾವು ಕಚ್ಚಿದ್ದು, ಅವರು ಆಸ್ಪತ್ರೆ ಸೇರಿದ್ದಾರೆ.
ರಾತ್ರಿ ಮನೆಗೆ ನುಗ್ಗಿದ ಹಾವು ಹಾಸಿಗೆಯ ಒಳಗೆ ಅಡಗಿಕೊಂಡಿದ್ದು, ರಾಜು ಅವರು ಮಲಗಲು ತೆರಳಿದಾಗ ಕಾಲಿಗೆ ಕಚ್ಚಿದೆ. ನೋವಿನಿಂದ ಬಳಲಿಸದ ರಾಜು ಅವರ ಬೊಬ್ಬೆ ಕೇಳಿ ಆಗಮಿಸಿದ ಜನ ಹಾವು ಹಿಡಿದಿದ್ದು, ಅದರ ಜೊತೆ ರಾಜು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.