
ಜೊಯಿಡಾ: ರಾಮನಗರದಲ್ಲಿ ಗೇಟಿಗೆ ಸಿಕ್ಕಿಬಿದ್ದಿದ್ದ ಜಿಂಕೆಯನ್ನು ಸ್ಥಳೀಯರು ರಕ್ಷಿಸಿದ್ದಾರೆ.
ಇಲ್ಲಿನ ಗಾಂದಲೆ ಕೃಷರ್ನ ಗೇಟಿನ ಮುಂಭಾಗದಲ್ಲಿ ಜಿಂಕೆಯ ತಲೆ ಸಿಕ್ಕಿಬಿದ್ದಿದ್ದು, ಸಾವು – ಬದುಕಿನ ನಡುವೆ ಹೋರಾಡುತ್ತಿತ್ತು. ಇದನ್ನು ಗಮನಿಸಿದ ಗಾಂದಲೆ ಕೃಷರ್ ಮಾಲಕ ಮಹಾದೇವ ಗಾಂದಲೆ ಸ್ಥಳೀಯರ ಸಹಾಯದಿಂದ ಗೇಟ್ನ ಕಬ್ಬಿಣದ ಸರಳನ್ನು ಮುರಿದು ಜಿಂಕೆಯ ಜೀವ ಕಾಪಾಡಿದರು. ನಂತರ ಜಿಂಕೆ ಕಾಡು ಸೇರಿತು.