
ಕುಮಟಾ: ಯಳವಳ್ಳಿ ಗಣೇಶ ಭಟ್ಟರ ಮನೆಗೆ ಬಂದಿದ್ದ ೧೨ ಅಡಿ ಹಾವನ್ನು ಉರಗ ತಜ್ಞ ಪವನ್ ನಾಯ್ಕ ಹಿಡಿದು ಕಾಡಿಗೆ ಬಿಟ್ಟರು.
ಗಣೇಶ್ ಅವರು ಚಹಾ ಮಾಡಲು ಅಡುಗೆ ಮನೆಗೆ ಹೋದಾಗ ಒಲೆಯ ಸುತ್ತ ಹಾವು ಓಡಾಡುತ್ತಿತ್ತು. ಹತ್ತಿರ ಹೋಗಿ ನೋಡಿದಾಗ ಇದು ಕಾಳಿಂಗ ಸರ್ಫ ಎಂದು ಅರಿತ ಅವರು ಕೂಡಲೇ ಉರಗ ರಕ್ಷಕ ಪವನ್ ನಾಯ್ಕರಿಗೆ ಫೋನ್ ಮಾಡಿದರು. ತಕ್ಷಣ ಆಗಮಿಸಿದ ಪವನ್ ಹಾವನ್ನು ಹಿಡಿದು, ಅರಣ್ಯಕ್ಕೆ ಬಿಟ್ಟರು.