
ಶಿರಸಿ: ರಾಮನಬೈಲ್ ಕುಳವೆ ಕ್ರಾಸ್ ಬಳಿ ಗಣೇಶ ನಗರದ ನಿಹಾಲ್ ಡಿಯಾಗೋ ಫರ್ನಾಂಡೀಸ್ ಎಂಬಾತ ಗಾಂಜಾ ಮಾರುತ್ತಿದ್ದಾಗ ಪೊಲೀಸರ ಬಳಿ ಸಿಕ್ಕಿಬಿದ್ದಿದ್ದಾನೆ.
ಈತನ ಬಳಿಯಿದ್ದ 80 ಸಾವಿರ ರೂ ಮೌಲ್ಯದ 804 ಗ್ರಾಂ ಗಾಂಜಾವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈತ ಬೇರೆಯವರಿಂದ ಗಾಂಜಾ ಖರೀದಿಸಿ, ಬೈಕ್ ಮೇಲೆ ಕುಳಿತು ದಾರಿಹೋಕರನ್ನು ಕರೆದು ವ್ಯಾಪಾರ ನಡೆಸುತ್ತಿದ್ದ. ಹೀಗಾಗಿ ಆತನ ಬೈಕ್ ಸಹ ಪೊಲೀಸರ ಪಾಲಾಗಿದೆ.