
ಕುಮಟಾ: ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ನೆನೆದ ಗೋಕರ್ಣದ ಬ್ರಾಹ್ಮಣ ಪರಿಷತ್\’ನ ತಡೆಗೋಡೆ ಜೂ 27ರ ರಾತ್ರಿ ಕುಸಿದಿದೆ.
ಇಲ್ಲಿನ ಸ್ಮಶಾನಕಾಳಿ ಮಂದಿರ ರಸ್ತೆಗೆ ಹೊಂದಿಕೊAಡು ಬ್ರಾಹ್ಮಣ ಪರಿಷತ್ ಕಟ್ಟಡವಿದ್ದು, ಇದಕ್ಕೆ ಹಾಕಲಾದ ತಡೆಗೋಡೆ ಮಳೆ ನೀರು ಕುಡಿದು ತೇವಗೊಂಡಿತ್ತು. ಮಳೆ ಮುಂದುವರೆದಿದ್ದರಿAದ ಗುರುವಾರ ರಾತ್ರಿ ಹಂತ ಹಂತವಾಗಿ ತಡೆಗೋಡೆ ಕುಸಿದು ಬಿದ್ದಿತು. ಈ ಪ್ರದೇಶದಲ್ಲಿ ನಿತ್ಯ ನೂರಾರು ಜನ ಓಡಾಡುತ್ತಾರೆ. ರಾತ್ರಿ ವೇಳೆ ಅನಾಹುತ ನಡೆದಿದ್ದರಿಂದ ಯಾವುದೇ ಜೀವ ಅಪಾಯಕ್ಕೆ ಸಿಲುಕಿಲ್ಲ.