
ಜೊಯಿಡಾ: ರಾಮನಗರದ ದಿವಾಕರ್ ಯಶವಂತ ಚೋರೆ ಎಂಬಾತರು ಅಕ್ಕಿ ಮಾಡಿಸಲು ರೈಸ್ ಮಿಲ್ಲಿಗೆ ತರುತ್ತಿದ್ದ ಭತ್ತ ವಾಹನ ಅಪಘಾತದ ಕಾರಣದಿಂದ ಮಣ್ಣುಪಾಲಾಗಿದೆ. ಮಣ್ಣಿನಡಿ ಬಿದ್ದ ಭತ್ತದ ಚೀಲಗಳನ್ನು ಕಷ್ಟಪಟ್ಟು ಆರಿಸಿದಾಗ ದೊರೆತ ಭತ್ತವನ್ನು ಅವರು ಅಕ್ಕಿ ಮಾಡಿಸಿದ್ದಾರೆ.
ದಿವಾಕರ್ ಅವರು ಬೆಳೆದಿದ್ದ 15 ಕ್ವಿಂಟಲ್ ಭತ್ತವನ್ನು ರಾಮನಗರದ ಮಸಣು ಶಿರೋಡ್ಕರ್ ಎಂಬಾತ ತನ್ನ ವಾಹನದಲ್ಲಿ ಹಾಕಿಕೊಂಡು `ಮಹಾರಾಜ ರೈಸ್ ಮಿಲ್\’ಗೆ ಬರುತ್ತಿದ್ದ. ವಾಹನ ಹಿಮ್ಮುಖವಾಗಿ ಚಲಿಸುವಾಗ ಕಚ್ಚಾ ರಸ್ತೆಯಲ್ಲಿ ಪಲ್ಟಿಯಾಗಿದ್ದು, ಭತ್ತದ ಚೀಲಗಳು ನೆಲಕ್ಕೆ ಬಿದ್ದವು. ವಾಹನ ಸಹ ಅದರ ಮೇಲೆ ಬಿದ್ದಿದ್ದು, ಜಖಂ ಆಗಿದೆ. ನಂತರ ಭತ್ತದ ಚೀಲಗಳನ್ನು ಆರಿಸಿ, ಅಕ್ಕಿ ಮಾಡಲು ಕೊಡಲಾಯಿತು.