
ಹೊನ್ನಾವರ: ಗೇರುಸೊಪ್ಪಾ ಡ್ಯಾಮ್ ಸೈಟ್ ಬಳಿ ಶುಕ್ರವಾರ ನಡೆದ ಅಪಘಾತದಲ್ಲಿ ಗಾಯಗೊಂಡಿದ್ದ ಭಟ್ಕಳದ ಓಮಿನಿ ಚಾಲಕ ಭಟ್ಕಳದ ಅಬ್ದುಲ್ ವಾಜಿದ್ (37) ಉಡುಪಿ ಆಸ್ಪತ್ರೆಗೆ ತೆರಳುವಾಗ ಸಾವನಪ್ಪಿದ್ದಾನೆ.
ಅಬ್ದುಲ್ ವಾಜಿದ್ ತನ್ನ ಕುಟುಂಬದ ಜೊತೆ ಓಮಿನಿಯಲ್ಲಿ ಶಿವಮೊಗ್ಗದ ಶಿರಾಳಿಕೊಪ್ಪಕ್ಕೆ ತೆರಳುತ್ತಿದ್ದಾಗ ಪ್ರವಾಸಿ ಬಸ್ ಗುದ್ದಿತ್ತು. ಈ ಅಪಘಾತದಲ್ಲಿ ಗಂಭೀರ ಗಾಯಗೊಂಡ ಅಬ್ದುಲ್ ವಾಜಿದ್ ಅವರನ್ನು ಹೊನ್ನಾವರ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಅವರನ್ನು ಉಡುಪಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ದಾರಿ ಮದ್ಯೆ ಸಾವನಪ್ಪಿದ್ದಾರೆ.