
ಶಿರಸಿ: ಪರಿಸರ ಇಲಾಖೆಯ ಪರವಾನಿಗೆ, ಉಚ್ಛ ನ್ಯಾಯಾಲಯದ ಮದ್ಯಂತರ ಆದೇಶ, ಬಗೆಹರಿಯದ ಭೂಸ್ವಾಧೀನ ಪರಿಹಾರ ವಿತರಣೆ, ಟೆಂಡರ್ ಪ್ರಕ್ರಿಯೆಗೆ ತಡ ಸೇರಿದಂತೆ ವಿವಿಧ ಕಾರಣಗಳಿಂದ ಕುಂಟುತ್ತ ಸಾಗಿದ ಶಿರಸಿ-ಕುಮಟಾ ರಸ್ತೆ ಕಾಮಗಾರಿಗೆ ಸದ್ಯ ಎಲ್ಲಾ ಅಡೆತಡೆಗಳು ದೂರವಾಗಿದ್ದರೂ ರಸ್ತೆ ಮಾತ್ರ ಸರಿಯಾಗಿಲ್ಲ.
ನಿತ್ಯ ಸಾವಿರಾರು ವಾಹನಗಳು ಓಡಾಡುವ ಈ ರಸ್ತೆ ಸಂಚಾರಕ್ಕೆ ಯೋಗ್ಯವಾಗಿಲ್ಲ. ಕುಮಟಾದಿಂದ ಶಿರಸಿಯವರೆಗೂ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಕುಮಟಾ ತಾಲೂಕಿನ ರಸ್ತೆ ಕಾಮಗಾರಿ ಮುಗಿಯದ ಹಾಗೂ ಹೊಸ ಸೇತುವೆ ಅಂಚಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಅವ್ಯವಸ್ಥೆ ಕಂಡು ಬರುತ್ತಿದೆ. ಉತ್ತಮ ದರ್ಜೆಯ ರಸ್ತೆಗಾಗಿ ಜನ ಹೋರಾಟ ನಡೆಸಿದರೂ ಸಮಸ್ಯೆ ಬಗೆಹರಿದಿಲ್ಲ ಎಂದು ಸಾಮಾಜಿಕ ಹೋರಾಟಗಾರ ರವೀಂದ್ರ ನಾಯ್ಕ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

`ನಿತ್ಯ ಸಾವಿರಾರು ವಾಹನ ಓಡಾಡುವ ರಸ್ತೆಯಲ್ಲಿ ಹೊಂಡಗಳಾಗಿದ್ದು, ಇದರಿಂದ ವಾಹನ ಸಂಚಾರಕ್ಕೆ ತೊಂದರೆ ಆಗುತ್ತಿದೆ. ಗಂಭೀರ ಸ್ವರೂಪದ ಅಪಘಾತ ಮತ್ತು ಸಾರ್ವನಿಕರ ಅನಾನೂಕುಲವನ್ನು ಪರಿಗಣಿಸಿ ಸೂಕ್ತ ಕ್ರಮ ಜರುಗಿಸಬೇಕು\’ ಎಂದು ರವೀಂದ್ರ ನಾಯ್ಕ ಒತ್ತಾಯಿಸಿದ್ದಾರೆ.