
ಅಯೋಧ್ಯಾದಲ್ಲಿ ರಾಮಮಂದಿರ ಉದ್ಘಾಟನೆಯ ಬಳಿಕ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುತ್ತಿರುವ ರಾಮ ಮಂದಿರದ ಉಸ್ತುವಾರಿ ನೋಡಿಕೊಂಡಿದ್ದ ಗೋಪಾಲ ಜಿ ಗೋಕರ್ಣಕ್ಕೆ ಆಗಮಿಸಿ, ಆತ್ಮಲಿಂಗ ದರ್ಶನ ಮಾಡಿದರು.
ಅಯೋಧ್ಯೆ ರಾಮಮಂದಿರದಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠೆಯ ವೇಳೆ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿತ್ತು. `ಶ್ರೀರಾಮ ಜನ್ಮಭೂಮಿಯಾದ ಅಯೋಧ್ಯಾ ಮತ್ತು ಪುಣ್ಯಕ್ಷೇತ್ರ ಗೋಕರ್ಣ ನಡುವಿನ ಪುರಾತನ ಮತ್ತು ಅವಿನಾಭಾವ ಸಂಬAಧ ಉತ್ತಮವಾಗಿದೆ. ಉತ್ತರ ಮತ್ತು ದಕ್ಷಿಣ ಕ್ಷೇತ್ರಗಳ ಸಂಬAಧವನ್ನು ಮತ್ತಷ್ಟು ಗಟ್ಟಿಗೊಳಿಸುವಲ್ಲಿ ಧಾರ್ಮಿಕ ಕ್ಷೇತ್ರಗಳ ಪಾತ್ರ ದೊಡ್ಡದು\’ ಎಂದು ಅವರು ಈ ವೇಳೆ ಅಭಿಪ್ರಾಯ ಹಂಚಿಕೊAಡರು.