
ಹೊನ್ನಾವರ: ಪಾರ್ಶವಾಯುದಿಂದ ಬಳಲುತ್ತಿದ್ದ ಕಮಲ ಪಟಗಾರ್ ಎಂಬಾತರನ್ನು ಕರೆದೊಯ್ಯುತ್ತಿದ್ದ ಆಂಬುಲೆನ್ಸ್ ಅಪಘಾತವಾಗಿದ್ದು, ಒಳಗಿದ್ದವರಿಗೆ ಗಾಯವಾಗಿದೆ.
ಜೂ 29ರಂದು ಕಮಲ ಪಟಗಾರ ಪಾರ್ಶವಾಯು ಚಿಕಿತ್ಸೆಗಾಗಿ ಕುಮಟಾ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿಂದ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ಸಾಗಿಸಬೇಕಿತ್ತು. ಕುಮಟಾದ ಸಂತೋಷ್ ಮಾಧವ ನಾಯ್ಕ ಅವರ ಆಂಬುಲೈನ್ಸ್\’ನಲ್ಲಿ ಅವರನ್ನು ಕರೆದೊಯ್ಯುತ್ತಿರುವಾಗ ಕೆಳಗನೂರು ಚರ್ಚ ಹತ್ತಿರ ಆಂಬುಲೆನ್ಸ್\’ಗೆ ದನ ಅಡ್ಡ ಬಂದಿದೆ. ದನದ ಜೀವ ಉಳಿಸಲು ಪ್ರಯತ್ನಿಸಿ ಆಂಬುಲೆನ್ಸ್ ಪಲ್ಟಿಯಾಗಿದೆ. ಇದರಿಂದ ಕಮಲ ಪಟಗಾರ್ ಅವರ ಮುಖ ಹಾಗೂ ಮೂಗಿಗೆ ಗಾಯವಾಗಿದೆ. ಅವರ ಜೊತೆಯಿದ್ದ ಕುಮಟಾ ಬಾಡದ ಮಮತಾ ಪಟಗಾರಗೆ ಸಹ ಗಾಯವಾಗಿದೆ.