
ಮುoಡಗೋಡ: ಆಲಳ್ಳಿ ದೇವಸ್ಥಾನದ ಅರಣ್ಯ ಪ್ರದೇಶದಲ್ಲಿ ಅಂದರ್-ಬಾಹರ್ ಆಡುತ್ತಿದ್ದ 7 ಜನರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಇಬ್ಬರು ಕಾಡಿನಲ್ಲಿ ಪರಾರಿಯಾಗಿದ್ದಾರೆ.
ಜೂ 29ರ ಸಂಜೆ ಪೊಲೀಸ್ ಉಪನಿರೀಕ್ಷಕ ಪರಶುರಾಮ ಮಿರ್ಚಗಿ ನೇತ್ರತ್ವದ ತಂಡ ಈ ದಾಳಿ ನಡೆಸಿದೆ. ಕಾತೂರಿನ ಪಕೀರಪ್ಪ ವಾಲ್ಮಿಕಿ, ಬಸವರಾಜ ಪೂಜಾರ, ನಾಗಯ್ಯ ಹಿರೇಮಠ, ಮೂಡಸಾಲಿಯ ಶ್ರೀಕಾಂತ ಲಕ್ಮಾಪುರ, ಹನಗಲ್ ಆರೇಕೊಪ್ಪದ ಗಿರೀಶ್ ಜ್ಯೋತಿಬಾನವರ್, ಆಲಳ್ಳಿಯ ಗುಡದಯ್ಯ ಗೌರಕ್ಕನವರ್ ಹಾಗೂ ಇಂದಿರಾನಗರದ ಪಾಂಡುರoಗ ಕಾಶಿಬಾಯಿ ಕಾಡಿನಲ್ಲಿ ವೃತ್ತಾಕಾರವಾಗಿ ಕುಳಿತು ಇಸ್ಪಿಟ್ ಆಡುತ್ತಿದ್ದರು. ಈ ವೇಳೆ ಶ್ರೀಕಾಂತ ಲಕ್ಮಾಪುರ ಮೂತ್ರ ವಿಸರ್ಜನೆಗಾಗಿ ಅಲ್ಲಿಂದ ಎದ್ದಿದ್ದು, ಆತನಿಗೆ ಪೊಲೀಸರ ಜೀಪು ಕಾಣಿಸಿದೆ. ತಕ್ಷಣ ಇತರರಿಗೂ ಸೂಚನೆ ಕೊಟ್ಟು ಆತ ಕಾಡಿಗೆ ಓಡಿದ್ದಾನೆ.
ಈ ವೇಳೆ ಇನ್ನಿತರರು ಓಡಲು ಪ್ರಯತ್ನಿಸಿದ್ದು, ಹರಡಿಕೊಂಡಿದ್ದ ಇಸ್ಪಿಟ್ ಎಲೆ ಹಾಗೂ ಹಣದ ಕಂತೆಯನ್ನು ಬಿಟ್ಟು ಬರಲು ಮನಸ್ಸು ಬಾರದೇ ಸಿಕ್ಕಿಬಿದ್ದಿದ್ದಾರೆ. ಆದರೂ, ಆಲಳ್ಳಿಯ ಗುಡದಯ್ಯ ಗೌರಕ್ಕನವರ್ ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಿದ್ದಾನೆ. ಆರೋಪಿತರ ಜೊತೆ ಕಾಡಿನಲ್ಲಿ ಹರಡಿಕೊಂಡಿದ್ದ 39100ರೂ ಹಣ ಹಾಗೂ ಇಸ್ಪಿಟ್ ಎಲೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.