
ಕುಮಟಾ: ಹೊನ್ನಾವರ ಕಡೆಯಿಂದ ಕುಮಟಾಗೆ ಆಗಮಿಸುತ್ತಿದ್ದ `ಸುಗಮ\’ ಬಸ್ ಬೈಕಿಗೆ ಗುದ್ದಿದ ಪರಿಣಾಮ ಬೈಕ್ ಸವಾರ ಸೂರಜ್ ಮಡಿವಾಳ (22) ಸ್ಥಳದಲ್ಲಿಯೇ ಸಾವನಪ್ಪಿದ್ದಾನೆ.
ಜೂ 29ರ ರಾತ್ರಿ 9.50ಕ್ಕೆ ಕೊಪ್ಪಳಕರವಾಡಿ ಬ್ರೌನದ್ ವುಡ್ ಶಾಪ್ ಬಳಿ ಈ ಅಪಘಾತ ನಡೆದಿದೆ. ಸುಗಮ ಬಸ್ ಚಾಲಕ ಬಾಬು ಮಡಿವಾಳ ಎಂಬಾತ ಅತ್ಯಂತ ವೇಗವಾಗಿ ಬಸ್ ಚಲಾಯಿಸಿಕೊಂಡು ಬಂದಿದ್ದು, ಏಕಾಏಕಿ ಬಸ್ಸನ್ನು ಬಲಬದಿಗೆ ತಿರುಗಿಸಿದ್ದಾನೆ. ಈ ವೇಳೆ ಮಾಸ್ತಿಕಟ್ಟೆಯಿಂದ ಗಿಬ್ ಸರ್ಕಲ್ ಕಡೆ ಬೈಕ್ ಮೇಲೆ ಹೊರಟಿದ್ದ ಸೂರಜ್ ಮಡಿವಾಳಗೆ ಬಸ್ ಗುದ್ದಿದೆ. ಇದರಿಂದ ಸೂರಜ್ ನೆಲಕ್ಕೆ ಅಪ್ಪಳಿಸಿ ತಲೆ ಒಡೆದಿದ್ದು, ಮೆದುಳು ಹೊರಬಂದು ಛಿದ್ರಗೊಂಡಿದೆ. ಆತ ಅಲ್ಲಿಯೇ ಕೊನೆ ಉಸಿರೆಳೆದಿದ್ದಾನೆ.