
ಕುಮಟಾ: ಇಲ್ಲಿನ ಎ ಪಿ ಎಂ ಸಿ ಬಳಿ ಇಕೋ ವಾಹನಕ್ಕೆ ಲಾರಿ ಗುದ್ದಿದ ಪರಿಣಾಮ ಇಕೋ ವಾಹನದಲ್ಲಿದ್ದ 7 ಜನ ಗಾಯಗೊಂಡಿದ್ದಾರೆ.
ಹಳಿಯಾಳದಲ್ಲಿ ಎಲೆಕ್ಟಿಶಿಯನ್ ಆಗಿ ಕೆಲಸ ಮಾಡುವ ತೌಸಿಫ್ ಎಂಬಾತ ತನ್ನ ಕುಟುಂಬದವರ ಜೊತೆ ಜೂ 29ರಂದು ಇಕೋ ವಾಹನದಲ್ಲಿ ಕುಮಟಾದಿಂದ ಹೊನ್ನಾವರ ಕಡೆ ಹೊರಟಿದ್ದ. ಆಗ ಹಿಂದಿನಿoದ ಬಂದ ಕೇರಳ ರಾಜ್ಯದ ಲಾರಿ ಈ ಕುಟುಂಬದವರು ಸಂಚರಿಸುತ್ತಿದ್ದ ವಾಹನಕ್ಕೆ ಗುದ್ದಿದೆ. ಲಾರಿ ಚಾಲಕ ಪೈಸಲ್ ನಿರ್ಲಕ್ಷ ಅಪಘಾತಕ್ಕೆ ಕಾರಣವಾಗಿದ್ದು, ತೌಸಿಪ್\’ನ ಪತ್ನಿ ಸವಿಮುನ್, ಮಗಳು ಸಿಮ್ರಾ, ತಂಗಿ ಪಿರದೋಸ್ ತಮ್ಮ ವಸೀಮ್, ನಾದಿನಿ ಹಪ್ಸಾ ಹಾಗೂ ತಂಗಿ ಮಗಳು ಸಿದ್ರಾ ಗಾಯಗೊಂಡಿದ್ದಾರೆ.