ಭಟ್ಕಳ: ಮುರುಡೇಶ್ವರದ ಮದ್ಯದಂಗಡಿಯ ಬಳಿ ಪ್ರಜ್ಞೆ ಇಲ್ಲದೇ ಬಿದ್ದುಕೊಂಡಿದ್ದ ಸೋನಾರಕೇರಿಯ ಕೃಷ್ಣ ಸುಕ್ರ ನಾಯ್ಕ (37) ಎಂಬಾತ ಆಸ್ಪತ್ರೆಗೆ ಸೇರಿಸುವ ವೇಳೆ ಸಾವನಪ್ಪಿದ್ದಾನೆ.
ಕೃಷ್ಣ ನಾಯ್ಕ ತನ್ನ ಪತ್ನಿ ಲೀಲಾ ಹಾಗೂ ಚಂದನ ಜೊತೆ ಕೂಲಿ ಕೆಲಸ ಮಾಡಿಕೊಂಡಿದ್ದ. ಜೂ 29ರ ರಾತ್ರಿ 8 ಗಂಟೆಗೆ ಈತ ವೈನ್ ಅಂಗಡಿ ಎದುರು ಪ್ರಜ್ಞೆ ಇಲ್ಲದೇ ಬಿದ್ದಿದ್ದ. ಇದನ್ನು ನೋಡಿದ ಗುಮ್ಮನಹಕ್ಕಲಿನ ಮಾಧವ ನಾಯ್ಕ ರಿಕ್ಷಾ ಚಾಲಕನಾಗಿರುವ ಆತನ ಅಣ್ಣ ಮಂಜಪ್ಪ ಸಕ್ರ ನಾಯ್ಕರಿಗೆ ಮಾಹಿತಿ ನೀಡಿದ್ದ. ತಕ್ಷಣ ತಮ್ಮನನ್ನು ನೋಡಲು ರಿಕ್ಷಾದಲ್ಲಿ ಹೊರಟ ಮಂಜಪ್ಪ ನಾಯ್ಕ ಆತನನ್ನು 108 ಆಂಬುಲೆನ್ಸ್ ಮೂಲಕ ಭಟ್ಕಳ ಸರಕಾರಿ ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ಮಾಡಿದ್ದ. ಆದರೆ, ಆಸ್ಪತ್ರೆ ಸೇರಿಸುವ ಮುಂಚಿತವಾಗಿ ಆತ ಸಾವನಪ್ಪಿರುವ ಬಗ್ಗೆ ಅಲ್ಲಿನ ವೈದ್ಯರು ತಿಳಿಸಿದರು.