
ಶಿರಸಿ: ಚಿಪಗೇರಿಯ ಮಹಾಬಲೇಶ್ವರ ಭಟ್ಟ ಎಂಬಾತರ ತೋಟ ಖರೀದಿಗೆ ಬಂದಿದ್ದ ಸಿದ್ದರಾಮೇಶ ಮೆಣಸಿನಕಾಯಿ ಎಂಬಾತರನ್ನು ವಂಚಿಸಿದ ನಕಲಿ ಪತ್ರಕರ್ತ ರವೀಶ ಹೆಗಡೆ ವಿರುದ್ಧ 35 ಸಾವಿರ ರೂ ವಂಚಿಸಿದ ದೂರು ದಾಖಲಾಗಿದೆ.
ಮಹಾಬಲೇಶ್ವರ ಹೆಗಡೆ ತೋಟ ಖರೀದಿಸಿಲು ಸಿದ್ದರಾಮೇಶ ಅವರು 2022ರಲ್ಲಿ 10 ಲಕ್ಷ ರೂ ಮುಂಗಡ ಹಣ ನೀಡಿದ್ದರು. ಆದರೆ, ಮಹಾಬಲೇಶ್ವರ ಹೆಗಡೆ ಜಮೀನು ನೋಂದಣಿ ಮಾಡಿಕೊಟ್ಟಿರಲಿಲ್ಲ. ಆಗ ಪ್ರವೇಶಿಸಿದ ಮಹಾಬಲೇಶ್ವರ ಹೆಗಡೆಯ ಸಂಬಂಧಿ ರವೀಶ ಹೆಗಡೆ ಜಮೀನು ಖರೀದಿಸಲು \’ಬ್ಯುಸಿನೆಸ್ ಅಕೊಂಟ್\’ ಮಾಡಿಕೊಡುವುದಾಗಿ ತಿಳಿಸಿ 35 ಸಾವಿರ ರೂ ಹಣ ಪಡೆದಿದ್ದ. ನಂತರ ಮಣಿಕಂಠ ನಾಯ್ಕ ಎಂಬಾತನ ಹೆಸರಿನಲ್ಲಿ ಜಮೀನು ಖರೀದಿಗೆ ಸಾಲ ತೆಗೆಸಿಕೊಡುವುದಾಗಿ ನಂಬಿಸಿದ್ದ. ಆದರೆ, ಈವರೆಗೂ ಜಮೀನು ವ್ಯವಹಾರ ಮಾಡಿಕೊಡದೇ, ಹಣವನ್ನು ಮರಳಿಸಿದೇ ವಂಚಿಸಿದ ಬಗ್ಗೆ ಸಿದ್ದರಾಮೇಶ ಪೊಲೀಸ್ ಪ್ರಕರಣ ದಾಖಲಿಸಿದ್ದಾರೆ.