
ಕಾರವಾರ: ಕೋಡಿಭಾಗದ ನಿವೃತ್ತ ಪೊಲೀಸ್ ಸಿಬ್ಬಂದಿ ಮಾರುತಿ ನಾಯ್ಕ ಅವರ ಮನೆಗೆ ನುಗ್ಗಿದ ಕಳ್ಳ ಅಲ್ಲಿದ್ದ 1.30 ಲಕ್ಷ ರೂ ಹಣದ ಜೊತೆ 6 ಲಕ್ಷ ರೂ ಮೌಲ್ಯದ ಚಿನ್ನವದನ್ನು ಕದ್ದಿದ್ದಾನೆ.
ಜೂ 29ರಂದು ಮಾರುತಿ ನಾಯ್ಕ ತಮ್ಮ ಕುಟುಂದವರ ಜೊತೆ ಬೆಂಗಳೂರಿಗೆ ಹೋಗಿದ್ದರು. ಹೋಗುವಾಗ ಮನೆಗೆ ಬೀಗವನ್ನು ಹಾಕಿದ್ದರು. ಅದಾಗಿಯೂ ಜೂ 29ರ ರಾತ್ರಿ ಬೀಗ ಒಡೆದು ಒಳ ನುಗ್ಗಿದ ಕಳ್ಳ ಎಲ್ಲಡೆ ತಡಕಾಡಿ ಸಿಕ್ಕಸಿಕ್ಕಿದೆಲ್ಲ ದೋಚಿ ಪರಾರಿಯಾಗಿದ್ದಾನೆ. ಮುಖ್ಯವಾಗಿ 15 ತೊಲೆ ಬಂಗಾರ ಹಾಗೂ 1.5 ಲಕ್ಷ ರೂ ಹಣ ಕಳ್ಳನ ಪಾಲಾಗಿದೆ. ಜೂ 30ರ ಬೆಳಗ್ಗೆ ಬೆಂಗಳೂರಿನಿಂದ ಬಂದ ಮಾರುತಿ ನಾಯ್ಕ ಅವರಿಗೆ ಇದರಿಂದ ಆಘಾತವಾಗಿದ್ದು, ಪೊಲೀಸ್ ದೂರು ನೀಡಿದ್ದಾರೆ.
ಕಾರವಾರದಲ್ಲಿ ಪೊಲೀಸರ ಮನೆ ಗುರಿಯಾಗಿರಿಸಿಕೊಂಡು ಕಳ್ಳತನ ನಡೆದಿರುವುದು ಇದೇ ಮೊದಲಲ್ಲ. ಆದರೆ, ಕಳ್ಳ ಮಾತ್ರ ಪತ್ತೆಯಾಗಿಲ್ಲ.