
ಯಲ್ಲಾಪುರ: ಪಶು ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿದ್ದ ಆರ್ ಎನ್ ಭಟ್ಟ ನಿಧನರಾಗಿದ್ದು, ಬಿಜೆಪಿ ಘಟಕದಿಂದ ಉಮ್ಮಚ್ಗಿಯ ವಿದ್ಯಾಗಣಪತಿ ಸಭಾಭವನದಲ್ಲಿ ಲ್ಲಿ ಅವರಿಗೆ `ನುಡಿನಮನ\’ ಕಾರ್ಯಕ್ರಮ ನಡೆಯಿತು.
`ಆರ್ ಎನ್ ಭಟ್ಟ ಅವರು ಅತ್ಯಂತ ಶ್ರಮಜೀವಿಗಳಾಗಿದ್ದರು. ಬಟ್ಟೆ ಹೊಲಿಯುವುದನ್ನು ವೃತ್ತಿಯನ್ನಾಗಿಸಿಕೊಂಡಿದ್ದ ಅವರು ಗ್ರಾ ಪಂ ಸದಸ್ಯರಾಗಿ ಸಹ ಸೇವೆ ಸಲ್ಲಿಸಿದ್ದರು. ಪಶುವೈದ್ಯ ಡಾ ದಿವಾಕರ ಭಟ್ಟ ಅವರಿಂದ ವೈದ್ಯಕೀಯ ಪದ್ಧತಿ ಕಲಿತ ಅವರು ತಮ್ಮ ಜೀವನದ ಉದ್ದಕ್ಕೂ ಮೂಕಜೀವಿಗಳ ಸೇವೆ ಮಾಡಿದ್ದರು. ಕೃಷಿಕರಾಗಿ ಸಹ ಉತ್ತಮ ಸಾಧನೆ ಮಾಡಿದ ಅವರ ಬದುಕು ಇತರರಿಗೆ ಪ್ರೇರಣೆ\’ ಎಂದು ವೈದ್ಯ ಡಾ ಎಂ ಎಸ್ ಮಾರಿಗೋಳಿ ಹೇಳಿದರು.
ಪ್ರಮುಖರಾದ ಜಿ.ಜಿ.ಹೆಗಡೆ ಕನೇನಳ್ಳಿ, ಶ್ರೀಪಾದ ಹೆಗಡೆ ಸಂಕದಗುoಡಿ ಮಾತನಾಡಿದರು. ಊರಿನ ಗಣ್ಯರಾದ ಗಣಪತಿ ಹಿರೇಸರ, ತಿಮ್ಮಪ್ಪ ಹೆಗಡೆ ಶೀಗೆಮನೆ, ಸರಸ್ವತಿ ಸುಬ್ರಾಯ ಪಟಗಾರ, ಜಿ.ಟಿ.ಹೆಗಡೆ, ರವೀಂದ್ರ ಆರ್.ಹೆಗಡೆ, ವಾಸು ಉಮ್ಮಚ್ಗಿ, ಮಣಿಕಂಠ ಇತರರು ಇದ್ದರು.