
ಕಾರವಾರ: ದುಡಿಯುವುದಕ್ಕಾಗಿ ಬೆಂಗಳೂರಿಗೆ ಹೋಗಿದ್ದ ಸರ್ವೋದಯನಗರದ ಪ್ರದೀಪ ಸೂರಂಗೇಕರ್ ಪ್ರಜ್ಞೆ ತಪ್ಪಿ ಬಿದ್ದಿದ್ದು, ಚಿಕಿತ್ಸೆ ವೇಳೆ ಸಾವನಪ್ಪಿದ್ದಾನೆ.
ಅತಿಯಾದ ಮದ್ಯ ಸೇವನೆ ಮಾಡುತ್ತಿದ್ದ ಆತನಿಗೆ ಕಾರವಾರದಲ್ಲಿ ಯಾವ ಕೆಲಸವೂ ಆಗಿಬಂದಿರಲಿಲ್ಲ. ಹೀಗಾಗಿ ಜೂ 27ರಂದು ಕೆಲಸ ಹುಡುಕಲು ಬೆಂಗಳೂರಿಗೆ ಹೋಗಿದ್ದ. ಮೂರು ದಿನ ಅಲ್ಲಿನ ಕಂಪನಿಯೊoದರಲ್ಲಿ ಕೆಲಸವನ್ನು ಮಾಡಿದ್ದ. ಹೀಗಿರುವಾಗ ಬೆಂಗಳೂರಿನ ಸಿಗ್ನಾಯಕನಹಳ್ಳಿಯ ಗೋದ್ರೇಜ್ ಅಪಾರ್ಟಮೆಂಟ್ ಬಳಿ ನಿಂತಿದ್ದಾಗ ಪ್ರಜ್ಞೆ ತಪ್ಪಿ ನೆಲಕ್ಕೆ ಬಿದ್ದಿದ್ದ. ಅಲ್ಲಿನ ಜನ ಆತನನ್ನು ಕೆ ಕೆ ಆರ್ ಆಸ್ಪತ್ರೆಗೆ ದಾಖಲಿಸಿದ್ದರು. ಈ ವಿಷಯ ತಿಳಿದ ಆತನ ಅಕ್ಕ ಶಿವಾನಿ ನಾಯ್ಕ ಹಾಗೂ ಸ್ನೇಹಿತ ಜೋನ್ ಆಸ್ಪತ್ರೆಗೆ ತೆರಳಿ ವಿಚಾರಿಸಿದ್ದು, ನಂತರ ಪ್ರದೀಪನನ್ನು ಕಾರವಾರಕ್ಕೆ ಕರೆತಂದಿದ್ದರು. ಇಲ್ಲಿ ಚಿಕಿತ್ಸೆಗೆ ಒಳಪಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಆಂಬುಲೆನ್ಸ್ ಮೂಲಕ ಹುಬ್ಬಳ್ಳಿಗೆ ಕರೆದೊಯ್ಯುವ ವೇಳೆ ಆತ ಅಕ್ಕನ ಮಡಿಲಿನಲ್ಲಿ ಪ್ರಾಣಬಿಟ್ಟಿದ್ದಾನೆ. ಪ್ರಸ್ತುತ ಕಾರವಾರ ಶವಾಗಾರದಲ್ಲಿ ಆತನ ದೇಹ ಇರಿಸಲಾಗಿದೆ.