
ಕುಮಟಾ: ಕಳೆದ ವರ್ಷ ನೀಡಿದ ಗಿಡಗಳನ್ನು ಜೋಪಾನ ಮಾಡುವ ಮೂಲಕ ನೆಹರುನಗರ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು `ಹಸಿರು ರಕ್ಷಕ\’ ಎಂಬ ಬಿರುದಿಗೆ ಪಾತ್ರರಾಗಿದ್ದಾರೆ.
ಈ ಶಾಲೆಯ ನಾಗೇಂದ್ರ ಗೌಡ, ಜ್ಯೋತಿಕಾ ಮುಕ್ರಿ ಹಾಗೂ ನಿಶಾಂತ ಗೌಡ ಎಂಬಾತರು ನಿತ್ಯ ಗಿಡಗಳ ಬಗ್ಗೆ ಕಾಳಜಿವಹಿಸುತ್ತಿದ್ದರು. ಗಿಡಕ್ಕೆ ಅಗತ್ಯವಿರುವ ನೀರುಗೊಬ್ಬರ ಉಣಿಸಿ ಅವುಗಳ ಆರೋಗ್ಯ ಕಾಪಾಡಿದ್ದರು. ಹೀಗಾಗಿ ಸಣ್ಣ ಸಣ್ಣ ಗಿಡಗಳು ಒಂದೇ ವರ್ಷದಲ್ಲಿ ದಷ್ಟಪುಷ್ಟವಾಗಿ ಬೆಳೆದಿದ್ದವು. ತಾವು ನೀಡಿದ ಗಿಡಗಳ ಬೆಳವಣಿಗೆ ಗಮನಿಸಲು ಆಗಮಿಸಿದ `ರೋಟರಿ ಕ್ಲಬ್\’ನವರು ಮಕ್ಕಳಿಗೆ ಗಿಡದ ಮೇಲಿರುವ ಪ್ರೀತಿ ಗಮನಿಸಿ ಮಕ್ಕಳನ್ನು ಪ್ರೋತ್ಸಾಹಿಸಿದರು. ಶಾಲಾ ಆವರದಲ್ಲಿ ಮಕ್ಕಳು ಅತ್ಯಧಿಕ ಗಿಡಗಳನ್ನು ಬೆಳೆಸಿ ಹಸಿರು ಹೆಚ್ಚಿಸಿರುವುದರಿಂದ ರೋಟರಿ ಕ್ಲಬ್\’ನವರು ಈ ಶಾಲೆಗೆ `ಹಸಿರು ರಕ್ಷಕ ಶಾಲೆ\’ ಎಂಬ ಪ್ರಶಸ್ತಿ ನೀಡಿದರು. ಈ ವರ್ಷ ಸಹ ಶಾಲಾ ಸುತ್ತಲು ಮಕ್ಕಳ ಜೊತೆ ರೋಟರಿ ಸದಸ್ಯರು ಇನ್ನಷ್ಟು ಗಿಡಗಳನ್ನು ನೆಟ್ಟರು.