
ಕುಮಟಾ: `ಕನ್ನಡ ಭಾಷೆ ನಮ್ಮ ಭಾವನೆಗೆ ಹಿಡಿದ ಕೈಗನ್ನಡಿ\’ ಎಂದು ನೆಲ್ಲಿಕೇರಿ ಪಬ್ಲಿಕ್ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಎಸ್ ಜಿ ಭಟ್ ನುಡಿದರು.
ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕನ್ನಡ ಭಾಷೆಯಲ್ಲಿ ಶೇ 100ರಷ್ಟು ಅಂಕಪಡೆದವರಿಗೆ ಕನ್ನಡ ಸಾಹಿತ್ಯ ಪರಿಷತ್ ಪರವಾಗಿ ಅಭಿನಂಧಿಸಿ ಅವರು ಮಾತನಾಡಿದರು.
`ಕನ್ನಡವನ್ನು ಉಳಿಸಿ ಬೆಳೆಸುವ ಹೊಣೆ ಪ್ರತಿಯೊಬ್ಬರ ಮೇಲಿದೆ\’ ಎಂದು ಜಿಲ್ಲಾ ಕಸಪ ಗೌರವ ಕಾರ್ಯದರ್ಶಿ ಜಾರ್ಜ್ ಫರ್ನಾಂಡಿಸ್ ಹೇಳೀದರು. ಶಿಕ್ಷಣಾಧಿಕಾರಿ ಎಲ್ ಆರ್ ಭಟ್ ಮಾತನಾಡಿ `ಕನ್ನಡದ ಕಣ್ಮಣಿಗಳನ್ನು ಗೌರವಿಸುವುದು ಉತ್ತಮ ಕೆಲಸ\’ ಎಂದರು. ಜಿಲ್ಲಾ ಕಸಾಪ ಅಧ್ಯಕ್ಷ ಬಿ ಎನ್ ವಾಸರೆ ಮಾತನಾಡಿ `ಇದೀಗ ಕನ್ನಡ ಭಾಷೆ ವಿಷಯವಾಗಿ ಸಾಧನೆ ಮಾಡಿದವರು ದೊಡ್ಡವರಾದ ನಂತರವೂ ಕನ್ನಡದ ಶ್ರೇಷ್ಠ ಸಾಧಕರಾಗಿ ಸಾಹಿತ್ಯ ಪರಿಷತ್ತಿನ ಈ ಗೌರವ ಹೆಚ್ಚಿಸಬೇಕು\’ ಎಂದು ಕರೆ ನೀಡಿದರು. ಶಾಲಾ ನೌಕರರ ಸಂಘದ ಅಧ್ಯಕ್ಷ ಅನಿಲ್ ರೋಡ್ರಗ್ರೀಸ್ ಇದ್ದರು.
ಪ್ರಮೋದ ನಾಯ್ಕ ಸ್ವಾಗತಿಸಿದ್ದರು. ಗಿರಿ ನಿರೂಪಿಸಿದರು. ಸುಬ್ಬಯ್ಯ ನಾಯ್ಕ ಪ್ರಸ್ತಾಪಿಸಿದರು. ಈ ವೇಳೆ ಗಣೇಶ ನಾಯ್ಕ ವಿದ್ಯಾರ್ಥಿಗಳಿಗೆ ಪಠ್ಯ ವಿತರಿಸಿದರು.