
ಕಾರವಾರ: ವೈದ್ಯರ ದಿನದ ಅಂಗವಾಗಿ ಉತ್ತಮ ಸೇವೆ ಸಲ್ಲಿಸುತ್ತಿರುವ ಹೃದಯ ತಜ್ಞ ಡಾ ಹೇಮಂತ ಕಾಮತ್ ಹಾಗೂ ವೈದ್ಯ ಡಾ ಸೂರಜ್ ನಾಯಕ ಅವರನ್ನು ರೋಟರಿ ಕ್ಲಬ್\’ನವರು ಸನ್ಮಾನಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ ಸುರಜ ನಾಯಕ `ಕೋವಿಡ್ ಸಮಯದಲ್ಲಿ ರೋಟರಿ ಸಂಸ್ಥೆಯವರು ತಮ್ಮ ಜೀವದ ಹಂಗು ಲೆಕ್ಕಿಸದೇ ಸಮಾಜದ ನೋವಿಗೆ ಸ್ಪಂದಿಸಿದ್ದಾರೆ\’ ಎಂದು ಸ್ಮರಿಸಿದರು. ಹೃದಯ ತಜ್ಞ ಡಾ ಹೇಮಂತ ಕಾಮತ ಮಾತನಾಡಿದರು.
ಕಾರವಾರ ರೋಟರಿ ಕ್ಲಬ್ ಅಧ್ಯಕ್ಷ ಎಮ್ ಪಿ. ಕಾಮತ ಸ್ವಾಗತಿಸಿದರು. ಕಾರ್ಯದರ್ಶಿ ಆನಂದ ನಾಯ್ಕ ವಂದಿಸಿದರು. ರೋಟರಿ ಟ್ರಸ್ಟ ಅಧ್ಯಕ್ಷ ಪ್ರಸನ್ನಾ ತೆಂಡೂಲಕರ ನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ಕೋಶಾಧ್ಯಕ್ಷ ಗುರು ಹೆಗಡೆ, ರಾಘವೇಂದ್ರ ಪ್ರಭು, ಎಮ್ ಎ ಕಿತ್ತುರ, ಮನೋಹರ ಕಾಂಬ್ಳಿ, ಮುರಲಿ ಗೊವೇಕರ, ಪ್ರದೀಪ ನಾಯ್ಕ, ಅಮರನಾಥ ಶೆಟ್ಟಿ, ಸಾತಪ್ಪಾ ತಾಂಡೇಲ ಇದ್ದರು.