
ಹೊನ್ನಾವರ: ಪ್ರಭಾತನಗರದಿಂದ ಹೊನ್ನಾವರ ಪೇಟೆಗೆ ಅಕ್ಕನನ್ನು ಕರೆದುಕೊಂಡು ಹೋಗುತ್ತಿದ್ದ ಪ್ರಶಾಂತ ಮೇಸ್ತಾ ಅವರ ಬೈಕ್ ಅಪಘಾತವಾಗಿದ್ದು, ಇದರಿಂದ ಅವರ ಅಕ್ಕ ಸುಜಾತಾ ಮೇಸ್ತ (42) ಗಾಯಗೊಂಡಿದ್ದಾರೆ.
ಚಾಲಕ ವೃತ್ತಿ ಮಾಡಿಕೊಂಡಿರುವ ಪ್ರಶಾಂತ ಮೇಸ್ತ ಜೂ 30ರಂದು ತನ್ನ ಅಕ್ಕನನ್ನು ಸ್ಕೂಟರಿನಲ್ಲಿ ಕೂರಿಸಿಕೊಂಡು ಪೇಟೆ ಕಡೆ ಹೊರಟಿದ್ದರು. ಸೆಂಟ್ ಇಗ್ನೇಶಿಯನ್ ಆಸ್ಪತ್ರೆ ಎದುರು ಅವರು ಏಕಾಏಕಿ ಬ್ರೆಕ್ ಹಾಕಿದ್ದರಿಂದ ಬೈಕ್ ಸ್ಕಿಡ್ ಆಗಿ ಸುಜಾತಾ ಮೇಸ್ತ ನೆಲಕ್ಕೆ ಅಪ್ಪಳಿಸಿದರು. ಇದರಿಂದ ತಲೆ ಹಾಗೂ ಕೈಗೆ ಗಾಯಗೊಂಡ ಸುಜಾತಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಅಪಘಾತವನ್ನು ನೋಡಿದ ಕೇಬಲ್ ಆಪರೇಟರ್ ಕೃಷ್ಣ ಮೇಸ್ತ ಘಟನೆಯ ಬಗ್ಗೆ ಪೊಲೀಸ್ ದೂರು ನೀಡಿದ್ದಾರೆ.