
ಯಲ್ಲಾಪುರ: ನಿರಂತರ ಮಳೆಗೆ ಗುಳ್ಳಾಪುರ ಬಳಿಯ ಫಣಸಗುಳಿ ಸೇತುವೆ ಮೇಲ್ಬಾಗ ನೀರು ಹರಿದಿದ್ದು, ಸೋಮವಾರ ತಾಲೂಕಾ ಆಡಳಿತದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಗುಳ್ಳಾಪುರದಿಂದ ಶೇವ್ಕಾರ್ – ಹೆಗ್ಗಾರ್ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಇದಾಗಿದೆ. ಸೇತುವೆ ಪೂರ್ಣ ಪ್ರಮಾಣದಲ್ಲಿ ಮುಳುಗಿದರೆ ಜನ ಸಂಪರ್ಕಕ್ಕೆ ತೊಂದರೆ ಆಗಲಿದೆ. ಕಳೆದ ಮಳೆಗಾಲದಲ್ಲಿ ಈ ಸೇತುವೆ ಮೇಲೆ ಅಪಾಯಕಾರಿ ರೀತಿಯಲ್ಲಿ ಲಾರಿ ಚಲಿಸಿ, ಅಪಘಾತವಾಗಿತ್ತು. ಈ ಹಿನ್ನಲೆ ತಹಶೀಲ್ದಾರ ಅಶೋಕ್ ಭಟ್ಟ, ಪೊಲೀಸ್ ನಿರೀಕ್ಷಕ ರಮೇಶ್ ಹಾನಾಪುರ, ವಲಯ ಅರಣ್ಯಾಧಿಕಾರಿ ಶಿಲ್ಪಾ ನಾಯ್ಕ ಇನ್ನಿತರರು ತೆರಳಿ ಪರಿಶೀಲನೆ ನಡೆಸಿ, ಜನರಲ್ಲಿ ಅರಿವು ಮೂಡಿಸಿದರು.